More

    ಫ್ಯಾಷನ್ ಶೋನಲ್ಲಿ ಸ್ಕರ್ಟ್, ಸೀರೆಯಲ್ಲಿ ಮಿಂಚಿದ ಪ್ರಾಧ್ಯಾಪಕರು; ವಿಡಿಯೋ ವೈರಲ್

    ನವದೆಹಲಿ: ಸುಂದರ ಯುವತಿಯರು ಸಾಮಾನ್ಯವಾಗಿ ವಿವಿಧ ಫ್ಯಾಷನ್ ಶೋಗಳಲ್ಲಿ ಮತ್ತು ರ‍್ಯಾಂಪ್ ವಾಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆದ ಫ್ಯಾಷನ್ ಶೋಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿಶೇಷವೆಂದರೆ ಇಲ್ಲಿ ಜಂಬಲಕಿಡಿಪಂಬ ಚಿತ್ರ ಪ್ರದರ್ಶನಗೊಂಡಿತ್ತು. ಈ ವೇದಿಕೆಯಲ್ಲಿ ಕೆಲವು ಪ್ರಾಧ್ಯಾಪಕರು ಸ್ಕರ್ಟ್ ಮತ್ತು ಸೀರೆ ಧರಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಮಹಿಳಾ ಶಿಕ್ಷಕರು ಪುರುಷರಂತೆ ಶರ್ಟ್ ಮತ್ತು ಪ್ಯಾಂಟ್ ಧರಿಸಿ ರ‍್ಯಾಂಪ್ ವಾಕ್ ಮಾಡಿದರೆ, ಪುರುಷರು ಸಾಂಪ್ರದಾಯಿಕ ಸ್ಕರ್ಟ್ ಮತ್ತು ಸೀರೆಯಲ್ಲಿ ಕ್ಯಾಟ್‌ವಾಕ್ ನಡೆಸಿದರು.

    ಈ ವೀಡಿಯೊವನ್ನು ಮೇ 23 ರಂದು @desimojito ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಶೇರ್ ಮಾಡಿದ ಒಂದೇ ದಿನದಲ್ಲಿ ಏಳು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಸುಮಾರು 6 ರಿಂದ 10 ಪ್ರಾಧ್ಯಾಪಕರು ಮಹಿಳೆಯರು ಧರಿಸುವ ವಿವಿಧ ಉಡುಪುಗಳನ್ನು ಧರಿಸಿ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದರು. ಕೆಲವರು ಏಕಾಂಗಿಯಾಗಿ ವೇದಿಕೆಯನ್ನು ಅಲಂಕರಿಸಿದರೆ, ಇನ್ನು ಕೆಲವರು ಜೋಡಿಯಾಗಿ  ಹೆಜ್ಜೆ ಹಾಕಿ ತಮ್ಮ ಡ್ರೆಸ್ಸಿಂಗ್ ಅನ್ನು ಇನ್ನಷ್ಟು ಸುಂದರವಾಗಿ ಪ್ರದರ್ಶಿಸಿದರು.

    ಸದ್ಯ ಈ ವೀಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆ ಹಲವು ನೆಟಿಜನ್‌ಗಳು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಿಂಚಿದರೆ, ಇಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಮನರಂಜನೆ ನೀಡುತ್ತಾರೆ.

    ಕಾರಿನಿಂದ ಮನೆಯ ತನಕ ಹಾರ್ದಿಕ್​ ಎಲ್ಲಾ ಆಸ್ತಿಯೂ ಅಮ್ಮನ ಹೆಸರಿನಲ್ಲಿದೆ; ನತಾಶಾಗೆ 70% ಅಲ್ಲ 7% ಕೂಡಾ ಸಿಗಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts