ಬೆಂಗಳೂರಲ್ಲಿ ಮಗು ಕೊಂದು ಟೆಕ್ನಿ ಪತ್ನಿ ಆತ್ಮಹತ್ಯೆ: ಸಾವಿಗೂ ಮುನ್ನ ಬರೆದ ಡೆತ್​ನೋಟ್​ ಪತ್ತೆ

New Project(4)
Published on

ಬೆಂಗಳೂರು: ಮೂರೂವರೆ ವರ್ಷದ ಮಗಳನ್ನು ಕೊಂದು ಟೆಕ್ನಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆರ್​.ಆರ್. ನಗರದಲ್ಲಿ ನಡೆದಿದೆ. ಸಾವಿಗೂ ಮುನ್ನ ಆಕೆ ಬರೆದ ಡೆತ್​ನೋಟ್​ ಪೊಲೀಸರಿಗೆ ಸಿಕ್ಕಿದೆ.

ದೀಪಾ(31) ಮತ್ತು ಇವಳ ಪುತ್ರಿ ರಿಯಾ ಮೃತರು. ಬ್ರಹ್ಮವರ ಮೂಲದ ದೀಪಾ 2017ರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆದರ್ಶ ಅವರನ್ನ ಮದುವೆ ಆಗಿದ್ದರು. ಆರ್​ಆರ್​ ನಗರದ ಮಂತ್ರಿ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ದಂಪತಿಗೆ ಮುದ್ದಾದ ಮಗಳು ಜನಿಸಿದ್ದು, ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ, ಗುರುವಾರ ಮನೆಯಲ್ಲೇ ಮಗುವನ್ನ ಕೊಂದು ದೀಪಾ ನೇಣಿಗೆ ಶರಣಾಗಿದ್ದು ಮಾತ್ರ ದುರಂತ.

ಸಾವಿಗೂ ಮುನ್ನ ದೀಪಾ ಬರೆದ ಡೆತ್​ನೋಟಲ್ಲಿ ''Nobody is responsible for it i just felt life is full of shits i am sorry mom and divya Love you shona"(ಇದಕ್ಕೆ ಯಾರೂ ಜವಾಬ್ದಾರರಲ್ಲ, ಜೀವನವು ಕೊಳಕುಗಳಿಂದ ತುಂಬಿದೆ ಎಂದು ಭಾವಿಸಿದೆ, ಅಮ್ಮ ನನ್ನನ್ನು ಕ್ಷಮಿಸು, ದಿವ್ಯಾ ಲವ್ ಯು ಶೋನಾ) ಎಂದಿದೆ.

ಕಳೆದ ವಾರದಿಂದ ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲ್ತಿದ್ದ ದೀಪಾಗೆ ಚಿಕಿತ್ಸೆ ಪಡೆದರೂ ಆರೋಗ್ಯ ಸುಧಾರಿಸಿರಲಿಲ್ಲವಂತೆ. ಹೀಗಾಗಿ ಜಿಗುಪ್ಸೆಗೊಂಡ ದೀಪಾ, ಗುರುವಾರ ರಾತ್ರಿ ಮಲಗಿದ್ದ ವೇಳೆ ಮಗುವಿನ ಕುತ್ತಿಗೆಗೆ ವೇಲ್ ಬಿಗಿದು, ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net