ಹೆಡೆ ಎತ್ತಿದ ನಾಗರಹಾವಿನ ಮುಂದೆ ಕನ್ನಡಿ ಇಟ್ಟ ಯುವಕ: ನಂತರ ನಡೆದಿದ್ದೇನು? ವಿಡಿಯೋ ವೈರಲ್​! Cobra

Cobra
Published on

Cobra : ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳು ಪ್ರತಿನಿತ್ಯ ಹರಿದಾಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನ ಸೆಳೆದು ಕ್ಷಣಾರ್ಧದಲ್ಲಿ ವೈರಲ್​ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ನಾಗರಹಾವುಗಳು ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದೆಂಬುದು ಎಲ್ಲರಿಗೂ ಗೊತ್ತೇ ಇದೆ. ಅವುಗಳನ್ನು ಪ್ರಚೋದಿಸಿದರೆ ಅವು ಕಚ್ಚುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹಾವುಗಳು ಎಷ್ಟೇ ಅಪಾಯಕಾರಿಯಾಗಿದ್ದರೂ, ಕೆಲವರು ಬೇರೆಯವರ ಗಮನ ಸೆಳೆಯಲು ಹಾವುಗಳನ್ನು ಒಳಗೊಂಡ ರೀಲ್‌ಗಳನ್ನು ಮಾಡುತ್ತಾರೆ. ತಮ್ಮ ಪ್ರಾಣಕ್ಕೆ ಕುತ್ತಾಗಬಹುದು ಎಂಬ ಅರಿವಿದ್ದರೂ ಲೈಕ್ಸ್​ ಮತ್ತು ವೀವ್ಸ್​ಗಾಗಿ ವಿಡಿಯೋ ಮಾಡುತ್ತಾರೆ. ಅಂತಹ ಒಂದು ರೀಲ್ ಪ್ರಸ್ತುತ ಹೊಸ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ಓರ್ವ ವ್ಯಕ್ತಿ ಹಾವಿಗೆ ಕನ್ನಡಿ ತೋರಿಸುತ್ತಾನೆ. ಆಗ ಅನಿರೀಕ್ಷಿತವಾಗಿ ಏನೋ ಒಂದು ಸಂಭವಿಸುತ್ತದೆ. ಅದೇನೆಂದರೆ, ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದ ಹಾವು ಇನ್ನೊಂದು ಹಾವು ಎಂದು ಭಾವಿಸುತ್ತದೆ. ಸ್ವಲ್ಪ ಸಮಯದವರೆಗೆ ಅದರತ್ತ ನೋಡುತ್ತದೆ. ನಂತರ ಬುಸ್​ ಎಂದು ಉಸಿರು ಚೆಲ್ಲಿ ಕೋಪದಿಂದ ಕನ್ನಡಿಯಲ್ಲಿರುವ ತನ್ನದೇ ಪ್ರತಿಬಿಂಬವನ್ನು ಕಚ್ಚಲು ಪ್ರಯತ್ನಿಸುತ್ತದೆ. ವಿಡಿಯೋದಲ್ಲಿ ನಾಗಿನ್ ಚಿತ್ರದ 'ತೇರೆ ಇಷ್ಕ್ ಕಾ ಮುಜ್ ಪರ್ ಹುವಾ ಯೇ ಅಸರ್ ಹೈ' ಎಂಬ ಹಾಡಿ ಹಿನ್ನೆಲೆಯಲ್ಲಿ ಪ್ಲೇ ಆಗುತ್ತದೆ.

ಈ ವಿಡಿಯೋವನ್ನು @salman_pathan230 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದ್ದು, 1.06 ಕೋಟಿಗೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಾವಿರಾರು ಜನರು ಕಾಮೆಂಟ್ ಮಾಡಿದ್ದು, ಹೆಚ್ಚಿನವರು ವಿಡಿಯೋದಲ್ಲಿರುವ ವ್ಯಕ್ತಿಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಹಾವಿನೊಂದಿಗೆ ಈ ರೀತಿ ವರ್ತಿಸಬಾರದು ಮತ್ತು ಅದು ತುಂಬಾ ಅಪಾಯಕಾರಿ ಎಂಬ ಕಾಮೆಂಟ್‌ಗಳು ಬಂದಿವೆ. ಅನೇಕ ಜನರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net