

ಕಾಸರಗೋಡು: ಕುತ್ತಿಕ್ಕೋಲ್ ಪಳ್ಳತ್ತುಂಗಾಲ್ ಸನಿಹ ಕೆರೆಯಲ್ಲಿ ಸ್ನಾನ ವಾಡುತ್ತಿರುವ ಮಧ್ಯೆ ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪಳ್ಳತ್ತುಂಗಾಲ್ ಪಾಲಕ್ಕುಡಿ ನಿವಾಸಿ ಜೇಮ್ಸ್(60) ಮೃತಪಟ್ಟವರು. ಬೇಡಡ್ಕ ತೋರ್ಕುಳತ್ತು ಎಂಬಲ್ಲಿ ಕೆರೆಯಲ್ಲಿ ಕುಟುಂಬ ಸ್ನೇಹಿತರೊಂದಿಗೆ ಸ್ನಾನಕ್ಕಾಗಿ ಕೆರೆಯ ನೀರಿಗೆ ಇಳಿದಿದ್ದರು. ಜೇಮ್ಸ್ ನೀರಲ್ಲಿ ಮುಳುಗೇಳುತ್ತಿರುವುದನ್ನು ಕಂಡು ಜತೆಗಿದ್ದವರು, ತಕ್ಷಣ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಬೇಡಡ್ಕ ತಾಲೂಕು ಆಸ್ಪತ್ರೆ ಸನಿಹ ಮೆಡಿಕಲ್ ನಡೆಸುತ್ತಿದ್ದರು. ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.