ಚಿಕ್ಕಪ್ಪನನ್ನೇ ಭೀಕರವಾಗಿ ಕೊಂದ; ಕಣ್ಣಿಗೆ ಖಾರದ ಪುಡಿ ಎರಚಿದ, ಚಾಕುವಿನಿಂದ ಕತ್ತು ಕೊಯ್ದ!

Murder
ಆರೋಪಿ ಪ್ರವೀಣ್ ಗದುಗಿನ
Published on

ಗದಗ: ಯುವಕನೊಬ್ಬ ಚಿಕ್ಕಪ್ಪನನ್ನು ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಇದೀಗ ವರದಿಯಾಗಿದೆ. ಗದಗದ ಬೆಟಗೇರಿಯ ತೆಂಗಿನಕಾಯಿ ಬಜಾರಿನಲ್ಲಿ ಈ ಘಟನೆ ನಡೆದಿದೆ. ಪ್ರವೀಣ್ ಗದುಗಿನ ಎಂಬಾತ ಆರೋಪಿ.

ತನ್ನ ಚಿಕ್ಕಪ್ಪ 42 ವರ್ಷದ ಮಂಜುನಾಥ ಗದುಗಿನ ಎಂಬವರನ್ನು ಪ್ರವೀಣ್​ ಭೀಕರವಾಗಿ ಕೊಲೆಗೈದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದಾನೆ. ಚಿಕ್ಕಪ್ಪನ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಕತ್ತುಕೊಯ್ದು ಕೊಂದು ಹಾಕಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಡಿವೈಎಸ್​ಪಿ ಪ್ರಲ್ಹಾದ್, ಇನ್​ಸ್ಪೆಕ್ಟರ್ ಭೀಮನಗೌಡ ಬಿರಾದಾರ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net