ಗುಂಡ್ಲುಪೇಟೆಯಲ್ಲಿ ಒಂದೆಡೆ ಭಾರತ್ ಜೋಡೋ‌ ಯಾತ್ರೆ, ಮತ್ತೊಂದೆಡೆ ಲೋಕಾಯುಕ್ತ ದಾಳಿ!

gundlupete checkpost
Published on

ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಗುಂಡ್ಲುಪೇಟೆಯಲ್ಲಿ‌ ಇಂದು (ಶುಕ್ರವಾರ) ಬೆಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.

ಗುಂಡ್ಲುಪೇಟೆ ಪ್ರವಾಸಿ ಮಂದಿರ ವೃತ್ತದಲ್ಲಿರುವ ಆರ್​ಟಿಒ ಚೆಕ್ ಪೋಸ್ಟ್​ ಮೇಲೆ ಲೋಕಾಯುಕ್ತ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆದಿದೆ. ಆರ್​ಟಿಒ ಅಧಿಕಾರಿ ಮಹೇಶ್ ಕರ್ತವ್ಯದಲ್ಲಿ‌ದ್ದ ವೇಳೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.‌ ಹಣ ವಸೂಲಿ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆ ಈ ದಾಳಿ ನಡೆದಿದೆ.

ಬೀದರ್​ನ ಹುಮನಾಬಾದ್​ನಲ್ಲಿರುವ ಆರ್​ಟಿಒ ಚೆಕ್​ಪೋಸ್ಟ್​​ ಮೇಲೂ ದಾಳಿ ಕಲಬುರಗಿ-ಬೀದರ್​ ಲೋಕಾಯುಕ್ತ ಟೀಂ ದಾಳಿ ನಡೆಸಿದೆ. ವಾಹನ ಸವಾರರಿಂದ ಹಣ ವಸೂಲಿ ದೂರುಗಳು ಕೇಳಿಬಂದ ಹಿನ್ನೆಲೆ ಈ ದಾಳಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net