100 ಅಡಿಗೆ ತಲುಪಿದ ಕೆಆರ್​ಎಸ್​ ನೀರಿನ ಮಟ್ಟ: ಸದ್ಯ ಕುಡಿವ ನೀರಿಗೆ ತೊಂದರೆ ಇಲ್ಲ

State-2 KRS
Published on

ಕೆ.ಆರ್​.ಸಾಗರ: ಕೃಷ್ಣರಾಜಸಾಗರ ಜಲಾಶಯದ ಅಣೆಕಟ್ಟೆ ನೀರಿನ ಮಟ್ಟ ಭಾನುವಾರ 100 ಅಡಿಗೆ ಇಳಿದಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಅಣೆಕಟ್ಟೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 7 ಅಡಿಯಷ್ಟು ನೀರಿನ ಸಂಗ್ರಹ ಹೆಚ್ಚಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರನ್ನು ಕುಡಿಯಲು ಅವಲಂಬಿಸಿರುವ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜಿಲ್ಲೆಯ ಜನರಿಗೆ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇರಲಾರದು.

ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. 2021ರ ನವೆಂಬರ್​ನಲ್ಲಿ ಅಣೆಕಟ್ಟೆ ತುಂಬಿದ ಕಾರಣ ನೀರಿನ ಸಂಗ್ರಹ ಉತ್ತಮವಾಗಿದೆ. ನೀರಿನ ಮಟ್ಟ 60 ಅಡಿಗೆ ತಲುಪಿದರೂ ಕುಡಿಯಲು ಬಳಸಬಹುದಾಗಿದೆ. ನೀರು ಸಂಗ್ರಹ ಮಟ್ಟ ಕುಸಿಯುತ್ತಿರುವ ಕಾರಣ ಅಣೆಕಟ್ಟೆ ಬರಿದಾಗಿ ಕಾಣಿಸುತ್ತಿದೆ.

ಉತ್ತಮವಾಗಿದೆ ನೀರಿನ ಸಂಗ್ರಹ: ಅಣೆಕಟ್ಟೆಯಲ್ಲಿ ಭಾನುವಾರ 100.40 (ಗರಿಷ್ಠ 124.80) ಅಡಿ, ಒಳಹರಿವು 665 ಕ್ಯೂಸೆಕ್​, ಹೊರ ಹರಿವು 3972 ಕ್ಯೂಸೆಕ್​, 23.269 (ಗರಿಷ್ಠ 49.454) ಟಿಎಂಸಿ ನೀರು ಸಂಗ್ರಹವಾಗಿದೆ. ಹಿಂದಿನ ಆರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮವಾಗಿದೆ.

ವರ್ಷ ಸಂಗ್ರಹ ಮಟ್ಟ (ಅಡಿಗಳಲ್ಲಿ)

2016 - 80.52

2017 - 73.21

2018 - 73.53

2019 - 91.08

2020 - 99.92

2021 - 93.75

ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಡ್ರಿಪ್​ ಯೋಜನೆಯಡಿ ಹಳೆಯ ಗೇಟುಗಳನ್ನು ಬದಲಾವಣೆ ಮಾಡಿದ್ದರಿಂದ ಸೋರಿಕೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುವುದಿಲ್ಲ.

| ಕೆ.ಜೆ.ವಿಜಯಕುಮಾರ್​ ಅಧೀಕ್ಷಕ ಇಂಜಿನಿಯರ್​, ಕಾವೇರಿ ನೀರಾವರಿ ನಿಗಮ, ಮಂಡ್ಯ ವೃತ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net