

ಮಂಡ್ಯ: ಹೆಗಲ ಮೇಲೆ ಕೈ ಹಾಕಲು ಬಂದ ಕಾರ್ಯಕರ್ತನ ತಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.
ಸಂಸದೆ ಸುಮಲತಾ v/s ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಸಮರ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತನ ತಲೆಗೆ ಡಿಕೆಶಿ ಭಾರಿಸಿದ ಏಟು ಮತ್ತಷ್ಟು ಸದ್ದು ಮಾಡುತ್ತಿದೆ. ಶನಿವಾರ ಬೆಳಗ್ಗೆ ಡಾ.ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಕೆ.ಎಂ.ದೊಡ್ಡಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಈ ವೇಳೆ ಪಕ್ಕದಲ್ಲಿಯೇ ಬರುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬನಿಗೆ ಡಿಕೆಶಿ ಹೊಡೆದಿದ್ದಾರೆ.
ಹಿಂಭಾಗದಿಂದ ಡಿಕೆಶಿ ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ. ಮೊಬೈಲ್ನಲ್ಲಿ ವಿಡಿಯೋ ಮಾಡ್ತಿರೋದನ್ನ ನೋಡಿ ಹೆಗಲ ಮೇಲೆ ಕೈ ಹಾಕ್ತಿಯಾ? ಕಾಮನ್‌ಸೆನ್ಸ್ ಇಲ್ವಾ? ಎಂದು ಕಾರ್ಯಕರ್ತನಿಗೆ ಡಿಕೆಶಿ ಗದರಿದರು. ಡಿಕೆಶಿ ಕೊಟ್ಟ ಏಟಿಗೆ ಕಾರ್ಯಕರ್ತರು ತಬ್ಬಿಬ್ಬಾದರು. ಡಿಕೆ ವರ್ತನೆಗೆ ಕೆಲ ಕಾರ್ಯಕರ್ತರು ಅಸಮಧಾನ ಹೊರಹಾಕಿದ್ದಾರೆ. ಈ ಹಿಂದೆಯೂ ಸೆಲ್ಫಿ ತೆಗೆದುಕೊಳ್ಳಲು ಬಂದ ಕಾರ್ಯಕರ್ತನಿಗೂ ಡಿಕೆಶಿ ಬಾರಿಸಿದ್ದರು.