ಕೇವಲ 14 ದಿನಕ್ಕೆ ಮುಗಿಯಲ್ಲ ಕರ್ನಾಟಕ ಲಾಕ್​ಡೌನ್​​! ಸುದ್ದಿಗೋಷ್ಠಿಯಲ್ಲಿ ಮಹತ್ವದ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ

BSY
Published on

ಬೆಂಗಳೂರು: ವೀಕೆಂಡ್​ ಕರ್ಫ್ಯೂ ಮಾದರಿಯಲ್ಲೇ ನಾಳೆ(ಏ.27) ರಾತ್ರಿ 9ರಿಂದ ಮೇ 10ರ ವರೆಗೆ ಕರ್ನಾಟಕ ಲಾಕ್ ಆಗಲಿದೆ. ಜನರ ಓಡಾಟಲೂ ಇರಲ್ಲ, ವಾಹನ ಸಂಚಾರವೂ ಇರುವುದಿಲ್ಲ.

ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಎಲ್ಲಿಯೂ ಲಾಕ್​ಡೌನ್​ ಎಂಬ ಪದ ಬಳಸಲಿಲ್ಲ. ಆದರೆ, ವೀಕೆಂಡ್​ ಕರ್ಫ್ಯೂ ಮಾದರಿಯಲ್ಲೇ ಕರ್ನಾಟಕದಾದ್ಯಂತ ಟೈಟ್​ ರೂಲ್ಸ್​ ಜಾರಿ ಆಗಲಿದೆ. ಮಹಾರಾಷ್ಟ್ರಕ್ಕಿಂತ ಬೆಂಗಳೂರು ಪರಿಸ್ಥಿತಿ ಘೋರವಾಗಿದೆ. ಎರಡು ವಾರದ ಬಳಿಕವೂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮತ್ತೊಂದು ವಾರ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದೊಳಗೆ ಗೂಡ್ಸ್​ ವಾಹನ ಸಂಚಾರಕ್ಕಿಲ್ಲ ಅಡ್ಡಿ. ಉಳಿದಂತೆ ಎಲ್ಲ ವಾಹನಗಳ ಓಡಾಟಕ್ಕೆ ಬ್ರೇಕ್​ ಬೀಳಲಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನ ಸಂಚಾರ ಬಂದ್​ ಆಗಲಿದೆ. ರಾಜ್ಯಕ್ಕೆ ಎಂಟ್ರಿ ಮತ್ತು ಎಕ್ಸಿಟ್​ಗೆ ಬ್ರೇಕ್​ ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net