ನಗ್ನಚಿತ್ರ ನೋಡುವ ಗೀಳು... ಪ್ರೇಯಸಿಯ ತಾಯಿ ಮೊಬೈಲ್​ಗೆ ವಿಡಿಯೋ ಕಳಿಸಿ ಆತ ಕೊಟ್ಟ ಕಾಟ ಅಷ್ಟಿಷ್ಟಲ್ಲ

Harassment sex
Published on

ಶಿವಮೊಗ್ಗ: ಸಾಮಾಜಿಕ ಜಾಲತಾಣದ ಮೂಲಕ ಪರಿಚಿತನಾದ ಯುವಕನೊಬ್ಬ ವಿದ್ಯಾರ್ಥಿನಿಯನ್ನ ಮದುವೆಯಾಗುವುದಾಗಿ ಆದೆ ಹುಟ್ಟಿಸಿದ. ಆಕೆಯನ್ನ ಪುಸಲಾಯಿಸಿ ತನ್ನ ಮೊಬೈಲ್‌ಗೆ ನಗ್ನಚಿತ್ರ ಮತ್ತು ವಿಡಿಯೋ ಕಳುಹಿಸು... ನಿನ್ನನ್ನು ಬೆತ್ತಲೆ ನೋಡಬೇಕು ಎಂದು ಕೇಳಿದ್ದ. ಹೇಗಿದ್ದರೂ ಮದುವೆಯಾಗುತ್ತೇವೆ ಎಂದು ನಂಬಿದ ವಿದ್ಯಾರ್ಥಿನಿ, ತನ್ನ ನಗ್ನಚಿತ್ರಗಳು ಮತ್ತು ವಿಡಿಯೋವನ್ನು ಸಂತೋಷ್ ಮೊಬೈಲ್‌ಗೆ ಕಳುಹಿಸಿದ್ದಳು... ನಗ್ನಚಿತ್ರ ನೋಡುವ ಗೀಳು ಬೆಳೆಸಿಕೊಂಡ ಆತ, ಕೊನೆಗೆ ಪ್ರೇಯಸಿಯ ಅಮ್ಮನ ಮೊಬೈಲ್​ಗೇ ನಗ್ನಚಿತ್ರ ಕಳುಹಿ ಕೊಟ್ಟ ಕಾಟ ಅಷ್ಟಿಷ್ಟಲ್ಲ...

ಕಾರವಾರದ ಸಂತೋಷ್ ಎಂಬಾತನ ವಿರುದ್ಧ ಸೈಬರ್​ ಕ್ರೈಂ ಪೊಲೀಸರಿಗೆ ವಿದ್ಯಾರ್ಥಿನಿ ದೂರು ಕೊಟ್ಟಿದ್ದಾಳೆ. ಫೇಸ್‌ಬುಕ್‌ನಲ್ಲಿ ವಿದ್ಯಾರ್ಥಿನಿಗೆ ಸಂತೋಷ್ ಪರಿಚಯವಾಗಿದ್ದ. ಆನಂತರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದು, ಇಬ್ಬರ ನಡುವೆ ಚಾಟಿಂಗ್ ನಡೆದಿತ್ತು. ಕ್ರಮೇಣ ಇಬ್ಬರ ನಡುವೆ ಸಲುಗೆ ಬೆಳೆದು ಸ್ನೇಹ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ ಸಂತೋಷ್, ತನ್ನ ಮೊಬೈಲ್‌ಗೆ ನಗ್ನ ಚಿತ್ರ ಮತ್ತು ವಿಡಿಯೋ ಕಳುಹಿಸುವಂತೆ ಕೇಳಿದ್ದ. ಪ್ರಿಯಕರನ ಮಾತಿಗೆ ಕಟ್ಟುಬಿದ್ದು, ಆತನ ಇಚ್ಛೆಯಂತೆ ಆಕೆ ತನ್ನ ನಗ್ನಚಿತ್ರಗಳನ್ನು ಸಂತೋಷ್ ಮೊಬೈಲ್‌ಗೆ ಕಳುಹಿಸಿದ್ದಳು. ಮತ್ತೆ ಮತ್ತೆ ಬೇರೆಬೇರೆ ಭಂಗಿಯಲ್ಲಿ ನಗ್ನಚಿತ್ರ ಮತ್ತ ವಿಡಿಯೋ ಕಳುಹಿಸುವಂತೆ ಒತ್ತಾಯಿಸುತ್ತಿದ್ದ.

ಒಂದು ಹಂತಕ್ಕೆ ನಗ್ನಚಿತ್ರ ಕಳುಹಿಸಿದ ಮೇಲೂ ಮತ್ತೆ ಸಂತೋಷ್​ನಿಂದ ಬರುತ್ತಿದ್ದ ಒತ್ತಡ ಸಹಿಸಲಾಗದೆ ಇನ್ಮುಂದೆ ಕಳುಹಿಸಲ್ಲ ಎಂದು ವಿದ್ಯಾರ್ಥಿನಿ ಹೇಳಿದ್ದೇ ತಡ, ತನ್ನ ವರಸೆ ಬದಲಿಸಿದ್ದ. ನಗ್ನ ಫೋಟೋ ಮತ್ತು ವಿಡಿಯೋ ವೀಕ್ಷಣೆ ಮಾಡುವ ಚಟ ಬೆಳೆಸಿಕೊಂಡ ಸಂತೋಷ್, ಮತ್ತಷ್ಟು ವಿಡಿಯೋ ಕಳುಹಿಸು ಎಂದು ಪೀಡಿಸುತ್ತಿದ್ದ. ವಿಡಿಯೋ ಕಳುಹಿಸಿದ್ದರೆ ಈಗಾಗಲೇ ಕಳುಹಿಸಿರುವ ನಗ್ನಚಿತ್ರ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ. ಇದರಿಂದ ಮಾನಸಿಕವಾಗಿ ರೋಸಿ ಹೋಗಿದ್ದ ಯುವತಿ, ಸಂತೋಷ್ ಜತೆ ಮಾತನಾಡುವುದನ್ನೇ ನಿಲ್ಲಿಸಿದ್ದಳು. ಸಿಟ್ಟಿಗೆದ್ದ ಸಂತೋಷ್​, ವಿದ್ಯಾರ್ಥಿನಿಯ ತಾಯಿಗೆ ಮಗಳ ನಗ್ನಚಿತ್ರ ವಿಡಿಯೋ ಕಳುಹಿಸಿ ಬೆದರಿಕೆ ಹಾಕಿದ್ದ. ಆತಂಕಗೊಂಡ ವಿದ್ಯಾರ್ಥಿನಿ ಸೈಬರ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸಂತೋಷ್ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net