ಚಿಕ್ಕಮ್ಮನ ಮನೆಯಲ್ಲಿ ಜೋಕಾಲಿ ಆಟವಾಡುತ್ತಿದ್ದ ಬಾಲಕನ ಪ್ರಾಣವನ್ನೇ ಹೊತ್ತೊಯ್ದ ಜವರಾಯ!

death
Published on

ಶಿವಮೊಗ್ಗ: ಸಾವು ಯಾವ ರೂಪದಲ್ಲಿ, ಯಾವಾಗ ಬರುತ್ತೆ ಎಂದು ಊಹಿಸುವಿಕೆ ಅಸಾಧ್ಯ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. 13 ವರ್ಷದ ಬಾಲಕನೊಬ್ಬಸೀರೆಯಲ್ಲಿ ಜೋಕಾಲಿ ಕಟ್ಟಿಕೊಂಡು ಆಟವಾಡುತ್ತಾ ನಲಿಯುತ್ತಿರುವಾಗಲೇ ಅವನ ಪ್ರಾಣವನ್ನು ಜವರಾಯ ಹೊತ್ತೊಯ್ದಿದ್ದಾನೆ.

ಇಂತಹ ದುರ್ಘಟನೆ ಶುಕ್ರವಾರ ಶಿವಮೊಗ್ಗದ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಿಶೋರ್(13) ಮೃತ ದುರ್ದೈವಿ. ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದ ಕಿಶೋರ್​, ಹಾಡೋನಹಳ್ಳಿಯ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ.

ಶುಕ್ರವಾರ ಮನೆಯಲ್ಲಿ ಸೀರೆ ಕಟ್ಟಿಕೊಂಡು ಜೋಕಾಲಿ‌ ಆಡುತ್ತಿದ್ದಾಗ ಜೋಕಾಲಿ ಸೀರೆ ಉರುಳಾಗಿ ಸುತ್ತಿಕೊಂಡು ಕಿಶೋರ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಲಕ ಹಾಡೋನಹಳ್ಳಿಯ ವೆಂಕಟೇಶ್ವರ ವಿದ್ಯಾಲಯದಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ಶಿವಮೊಗ್ಗ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net