More

    ತಲೈವಾ ನಟಿಸಲಿರುವ 170ನೇ ಚಿತ್ರದ ಬಗ್ಗೆ ಹೊರಬಿತ್ತು ಕುತೂಹಲಕಾರಿ ಸುದ್ದಿ!

    ತಮಿಳುನಾಡು: ಕಾಲಿವುಡ್​ನ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಅಭಿನಯಿಸಲಿರುವ ಮುಂದಿನ 170ನೇ ಚಿತ್ರದ ಬಗ್ಗೆ ಇದೀಗ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.

    ಇದನ್ನೂ ಓದಿ: ‘ಎಕ್ಸ್’ ಒಡೆಯಮತ್ತು ಮೆಟಾ ಮಾಲೀಕರ ಕೇಜ್ ಫೈಟ್! ಕಾದಾಟಕ್ಕೂ ಮೊದಲು ಕಾಲೆಳೆಯುವ ಕಿಲಾಡಿಗಳು…

    ತಲೈವಾ ನಟನೆಯ ಬಹುನಿರೀಕ್ಷಿತ ‘ಜೈಲರ್’ ಚಿತ್ರ ಇದೇ ಆಗಸ್ಟ್ 10 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗುತ್ತಿದೆ. ಈ ಮಧ್ಯೆ, ರಜನಿಕಾಂತ್ ಅವರ ಮುಂದಿನ ಚಿತ್ರದ ಬಗ್ಗೆ ಇದೀಗ ಹೊಸ ವದಂತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಮಾಹಿತಿಯ ಪ್ರಕಾರ, ‘ಜೈ ಭೀಮ್’ ಸಿನಿಮಾದ ಖ್ಯಾತಿಯ ಟಿ.ಜೆ. ಜ್ಞಾನವೇಲ್ ನಿರ್ದೇಶಿಸಲಿರುವ 170ನೇ ಚಿತ್ರಕ್ಕಾಗಿ ರಜನಿಕಾಂತ್​ 50 ದಿನಗಳ ಕಾಲ್ ಶೀಟ್ ನೀಡಿದ್ದಾರೆ ಎನ್ನಲಾಗಿದೆ.

    ಈ ಚಿತ್ರದ ಚಿತ್ರೀಕರಣವು ಅಕ್ಟೋಬರ್ 2023 ರಲ್ಲಿ ಪ್ರಾರಂಭವಾಗಲಿದ್ದು, ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಫಹದ್ ಫಾಸಿಲ್, ನಾನಿ ಮತ್ತು ಮಂಜು ವಾರಿಯರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳಿವೆ! ಸದ್ಯ ಈ ಬಗ್ಗೆ ಚಿತ್ರ ತಯಾರಕರಿಂದ ಯಾವುದೇ ಅಧಿಕೃತ ಮಾಹಿತಿಯೂ ಹೊರಬಂದಿಲ್ಲ.

    ಇದನ್ನೂ ಓದಿ: ಸೈಕಲ್ ಏರಿ ಚಾಲಕರ ಹಾಜರಾತಿ, ಕಸ ಸಂಗ್ರಹ ವಾಹನವೇರಿ ಕಾರ್ಮಿಕರ ಕಾರ್ಯವೈಖರಿ ಪರಿಸೀಲಿಸಿದ ಪಾಲಿಕೆ ಆಯುಕ್ತ

    ಇತ್ತೀಚೆಗಷ್ಟೇ ಚಿತ್ರದಲ್ಲಿ ರಜನಿಕಾಂತ್​ ಅವರ ಹೊಸ ಲುಕ್​ವೊಂದು ರಿಲೀಸ್​ ಆಗಿದ್ದು, ಇದು ತಲೈವಾ ಅಭಿಮಾನಿಗಳಿಗೆ ಭಾರೀ ಸಂತಸ ತಂದಿದೆ. ಚಿತ್ರಕ್ಕೆ ತಾತ್ಕಾಲಿಕವಾಗಿ ‘ತಲೈವರ್ 170’ ಎಂಬ ಟೈಟಲ್​ ಇಡಲಾಗಿದ್ದು, ಲೈಕಾ ಪ್ರೊಡಕ್ಷನ್​ ಸಂಸ್ಥೆ ನಿರ್ಮಾಣದ ಜವಾಬ್ದಾರಿ ಹೊರಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

    ಈ ದಿನ ರಿಲೀಸ್​ ಆಗಲಿದೆ ನಟಿ ಸುಶ್ಮಿತಾ ಸೇನ್ ಅಭಿನಯದ ‘ತಾಲಿ’ ವೆಬ್​ ಸೀರಿಸ್​ ಟ್ರೇಲರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts