

ವಿಜಯನಗರ: ಕರೊನಾ ಉಲ್ಬಣಗೊಂಡಿದ್ದು, ಸಾವು-ನೋವಿನ ಪ್ರಮಾಣವೂ ಹೆಚ್ಚುತ್ತಲೇ ಇದೆ. ಇದೀಗ ಅಂತಾರಾಷ್ಟ್ರೀಯ ಕ್ರೀಡಾಪಟುವೊಬ್ಬರು ಕರೊನಾಗೆ ಬಲಿಯಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರೀಡಾಪಟು, ಹೊಸಪೇಟೆಯ ಕಿಚಡಿ ದಯಾನಂದ ಕರೊನಾದಿಂದ ಮೃತಪಟ್ಟವರು. ವೇಟ್ ಲಿಫ್ಟರ್ ಆಗಿದ್ದ ದಯಾನಂದ ಅವರು 25 ದಿನಗಳ ಹಿಂದೆ ಕಾಶ್ಮೀರಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಹೋಗಿ ಬಂದಿದ್ದರು. ಒಂದು ವಾರದ ಹಿಂದೆ ಇವರಿಗೆ ಕರೊನಾ ಸೋಂಕು ತಗುಲಿತ್ತು.
ದಾವಣಗೆರೆಯ ಖಾಸಗಿ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ದಯಾನಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.