More

    ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಾಮುಕರು: ಶಿವಮೊಗ್ಗದಲ್ಲಿ ಹೇಯ ಕೃತ್ಯ

    ಶಿವಮೊಗ್ಗ: ಅಪ್ರಾಪ್ತೆ ಮೇಲೆ ಅಟ್ಟಹಾಸ ಮೆರೆದ ಕಾಮುಕರಿಬ್ಬರು ಅತ್ಯಾಚಾರದ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

    ಇಂತಹ ಹೇಯ ಕೃತ್ಯ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ‌ ನಡೆದಿದ್ದು, ಕಾಮುಕರ ಕೃತ್ಯ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಆರೋಪಿಗಳಾದ ಸಂತೋಷ್ ಹಾಗೂ ಸುನೀಲ್ ಇಬ್ಬರೂ ಸಂತ್ರಸ್ತೆಯ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಪ್ರಾಪ್ತೆ ಕಾಲೇಜು ಮುಗಿಸಿಕೊಂಡು‌ ಮನೆಗೆ ತೆರಳಲು‌ ಬಸ್ಸಿಗೆ ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದ ಯುವಕರಿಬ್ಬರು ನಾವೂ ನಿಮ್ಮೂರಿಗೆ ಹೋಗುತ್ತಿದ್ದೇವೆ. ಮನೆಗೆ ಡ್ರಾಪ್​ ಮಾಡ್ತೀವಿ ಬಾ ಎಂದು ಆಕೆಯನ್ನ ಪುಸಲಾಯಿಸಿ ಕಾರಿನಲ್ಲಿ‌ ಕರೆದೊಯ್ದಿದ್ದಾರೆ.

    ಬಾಲಕಿಯನ್ನು ಆಕೆಯ ಮನೆಗೆ ಕರೆದೊಯ್ಯದೆ ಸುನೀಲ್​ನ ರೂಂಗೆ ಕರೆದೊಯ್ದು ಇಬ್ಬರೂ ಅತ್ಯಾಚಾರ ನಡೆಸಿದ್ದಾರೆ. ಅಷ್ಟೇ ಅಲ್ಲ ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡು, ಅತ್ಯಾಚಾರ ನಡೆದ ಬಗ್ಗೆ ಯಾರಿಗಾದರೂ ಹೇಳಿದರೆ ಬೆತ್ತಲೆ ವಿಡಿಯೋವನ್ನ ಎಲ್ಲರಿಗೂ ಕಳುಹಿಸುತ್ತೇವೆ ಎಂದು ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್​ ಮಾಡುತ್ತಾ ಪದೇಪದೆ ಆಕೆಗೆ ತಮ್ಮ ರೂಂಗೆ ಬರುವಂತೆ ಕಾಮುಕರು ಪೀಡಿಸಿದ್ದಾರೆ. ಇದಕ್ಕೆ ಸಂತ್ರಸ್ತೆ ಒಪ್ಪಿಲ್ಲ‌. ಸಿಟ್ಟಾದ ಸಂತೋಷ್ ಹಾಗೂ ಸುನೀಲ್ ಇಬ್ಬರೂ ತಮ್ಮ ಮೊಬೈಲ್​ನಲ್ಲಿದ್ದ ವಿಡಿಯೋವನ್ನು ರಾಘವೇಂದ್ರ, ಸಚಿನ್, ಸುಬ್ಬು ಎಂಬುವರಿಗೆ ಕಳುಹಿಸಿದ್ದಾರೆ. ಹೀಗೆ ಶೇರ್ ಆಗಲಾರಂಭಿಸಿದ ವಿಡಿಯೋ ಪೊಲೀಸರಿಗೂ ಸಿಕ್ಕಿದೆ.

    ಕೂಡಲೇ ಎಚ್ಚೆತ್ತ ಹೊಸನಗರ ಪೊಲೀಸರು ಸುಮೋಟೋದಡಿ ಐಟಿ ಕೇಸ್ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಅಷ್ಟರಲ್ಲಿ ಸಂತ್ರಸ್ತೆಯೂ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಳು. ಅತ್ಯಾಚಾರಿ ಆರೋಪಿಗಳಿಬ್ಬರ ಜತೆಗೆ ವಿಡಿಯೋ ಶೇರ್ ಮಾಡಿದ್ದ ಮೂವರು ಸೇರಿ ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ‌.

    ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮಾನ್ಸ್​! ತಬ್ಬಿಕೊಂಡು ಮುತ್ತಿಡುತ್ತಿರುವ ವಿಡಿಯೋ ವೈರಲ್​, ಎಚ್​.ಡಿ.ಕೋಟೆಯಲ್ಲಿ ಘಟನೆ

    ಒಲ್ಲೆ ಎಂದರೂ ಅಣ್ಣನ ಎದುರೇ ‘ಬಾ.. ಮೊದಲಿನಂತೆ ನನ್ನ ಜತೆಗಿರು ಬಾ..’ ಎಂದು ಸೋದರಿಯನ್ನ ಪೀಡಿಸುತ್ತಿದ್ದ… ನಡೆದೇ ಹೋಯ್ತು ಘೋರ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts