ಮಾಲೀಕನ ಎಡವಟ್ಟಿಗೆ ರಾತ್ರೋರಾತ್ರಿ 32 ಕುಟುಂಬಗಳನ್ನ ಬೀದಿಗೆ ದಬ್ಬಿ ಮನೆಗಳಿಗೆ ಬೀಗ ಜಡಿದ ಬ್ಯಾಂಕ್ ಅಧಿಕಾರಿಗಳು

bank loan
Published on

ತುಮಕೂರು: ಮನೆ ಮಾಲೀಕ ಸಾಲ ಕಟ್ಟದ ಪರಿಣಾಮ ಬಾಡಿಗೆ ಮನೆಯಲ್ಲಿದ್ದವರನ್ನು ಬ್ಯಾಂಕ್ ಅಧಿಕಾರಿಗಳು ರಾತ್ರೋರಾತ್ರಿ ಬೀದಿಗೆ ದಬ್ಬಿರುವ ಘಟನೆ ನಗರದಲ್ಲಿ ನಡೆದಿದೆ. ಸುರಿವ ಮಳೆಯಲ್ಲಿ ಮಕ್ಕಳು-ವೃದ್ಧರು ರಸ್ತೆಬದಿಯಲ್ಲೇ ನಿಂತು ಗೂಡಿಗಾಗಿ ಪರದಾಡಿದ್ದಾರೆ.

ನಗರದ ಬನಶಂಕರಿಯಲ್ಲಿ ಮಂಜುನಾಥ್ ಎಂಬುವರ ಬ್ಯಾಂಕ್ ನಲ್ಲಿ ಸಾಲ ಪಡೆದು 3 ಕಟ್ಟಡಗಳನ್ನು ಕಟ್ಟಿ 32 ಕುಟುಂಬಗಳಿಗೆ ಬಾಡಿಗೆ ನೀಡಿದ್ದಾರೆ. ಆದರೆ, ಮಂಗಳವಾರ ರಾತ್ರಿ ಮಾಲೀಕನ ಎಡವಟ್ಟಿನಿಂದ ಈ ಕುಟುಂಬಗಳು ಮನೆ ಹೊರಗಡೆ ಕಾಲ ಕಳೆಯುವಂತಾಗಿದೆ.

ಬುಧವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲು ಅವಕಾಶವಾಗದಂತೆ ಬ್ಯಾಂಕ್ ಅಧಿಕಾರಿಗಳು ಮಂಗಳವಾರ ರಾತ್ರಿ ಬಾಡಿಗೆದಾರರನ್ನು ಖಾಲಿ ಮಾಡಿಸಿ ಮನೆಗಳಿಗೆ ಬೀಗ ಜಡಿದಿದ್ದಾರೆ.

ಕೆನರಾ ಬ್ಯಾಂಕ್ ಹಾಗೂ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಅಧಿಕಾರಿಗಳು ಮನೆಗಳನ್ನು ಜಪ್ತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net