More

    ಎಲ್ಲೆಡೆ ಮಹಾಲಯ ಅಮಾವಾಸ್ಯೆ ಆಚರಣೆ: ಮಳೆಯನ್ನೂ ಲೆಕ್ಕಿಸದೆ ಸ್ಮಶಾನದಲ್ಲಿ ಪಿತೃ ಪೂಜೆ

    ಬೆಂಗಳೂರು: ಇಂದು ಮಹಾಲಯ ಅಮಾವಾಸ್ಯೆ. ಗತಿಸಿದ ಹಿರಿಯರನ್ನು ಸ್ಮರಿಸುತ್ತಾ, ಅವರಿಗೆ ತರ್ಪಣ ಬಿಡುವ, ಎಡೆ ಹಾಗೂ ಶ್ರಾದ್ಧಗಳನ್ನು ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಬೆಳಗ್ಗೆಯಿಂದಲೇ ಕಂಡು ಬಂತು. ನಿನ್ನೆ ಸಂಜೆಯಿಂದಲೇ ಅಮಾವಸ್ಯೆ ಆರಂಭವಾದ ಹಿನ್ನೆಲೆ ನಿನ್ನೆ ರಾತ್ರಿಯೇ ಕೆಲವರು ಪಿತೃಪಕ್ಷ ಆಚರಿಸಿದ್ದಾರೆ. ಬಹುತೇಕರು ಇಂದು ಆಚರಣೆ ಮಾಡುತ್ತಿದ್ದಾರೆ. ಮೃತರ ಸಮಾಧಿ ಬಳಿ ತೆರಳಿ ಅವರಿಗೆ ಇಷ್ಟವಾದ ಪದಾರ್ಥವನ್ನು ಎಡೆ ಇಟ್ಟು ಪೂಜೆ ನೆರವೇರಿ ಮನೆಗೆ ಬಂದು ಧೂಪ ಹಾಕುತ್ತಿದ್ದಾರೆ.

    ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಸಾವಿರಾರು ಮಂದಿ ಕುಟುಂಬ ಸಮೇತ ಆಗಮಿಸಿ ಪೂರ್ವಿಕರಿಗೆ ಪಿಂಡ ಪ್ರದಾನ ಮಾಡಿದರು. ಸ್ಥಳೀಯ ವೈದಿಕರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ನಡೆದಿದೆ. ಕಾವೇರಿ ನದಿ ದಂಡೆಯ ಪಶ್ವಿಮವಾಹಿನಿ, ಸಂಗಮ, ಘೋಸಾಯ್ ಘಾಟ್, ಸ್ನಾನಘಟ್ಟ ಪ್ರದೇಶದಲ್ಲಿ ಪಿತೃ ಪೂಜೆ ಮಾಡಿದ್ದಾರೆ.

    ಇನ್ನು ಹಲವೆಡೆ ನಿನ್ನೆ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಸ್ಮಶಾನಗಳು ಜಲಾವೃತಗೊಂಡಿವೆ. ಮಹಾಲಯ ಅಮಾವಾಸ್ಯೆ ದಿನದಂದು ಪಿತೃಪಕ್ಷ ಆಚರಿಸುವ ಜನರು ತಮ್ಮ ಕಟುಂಬಸ್ಥರ ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸಿದ್ದಾರೆ. ಕೋಲಾರದಲ್ಲೂ ಮಳೆಯಿಂದಾಗಿ ಕೋಲಾರಮ್ಮ ಕೆರೆ ಕೋಡಿಯಾಗಿದ್ದು, ಪರಿಣಾಮ ಪಕ್ಕದಲ್ಲೇ ಇದ್ದ ಸ್ಮಶಾನ ಜಲಾವೃತಗೊಂಡಿದೆ. ಇಂದು ಬೆಳಗ್ಗೆ ಸಮಾಧಿಗೆ ಪೂಜೆ ಮಾಡಲು ಬಂದ ಜನ ಹರಸಾಹಸ ಪಟ್ಟರು. ನೀರಿನಲ್ಲೇ ನಿಂತು ಪೂಜೆ ಸಲ್ಲಿಸಿದರು.

    ಮಹಾಲಯ ಅಮಾವಾಸ್ಯೆ ದಿನವೇ ದುರಂತ: ತಾಯಿ-ಮಗ ಕಾರಿನಲ್ಲೇ ಸಾವು

    ರಾಜ್ಯದ ಹಲವೆಡೆ ವರುಣನ ಆರ್ಭಟ: ಕೋಡಿಬಿದ್ದ ಕೆರೆಗಳು, ಕೃಷಿಭೂಮಿ ಜಲಾವೃತ, ಜನಜೀವನ ಅಸ್ತವ್ಯಸ್ತ

    ಮಾಲೀಕನ ಎಡವಟ್ಟಿಗೆ ರಾತ್ರೋರಾತ್ರಿ 32 ಕುಟುಂಬಗಳನ್ನ ಬೀದಿಗೆ ದಬ್ಬಿ ಮನೆಗಳಿಗೆ ಬೀಗ ಜಡಿದ ಬ್ಯಾಂಕ್ ಅಧಿಕಾರಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts