ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ: ಚಹಾ ಮಾರುವವನಿಗೆ ಬಿಜೆಪಿ ಟಿಕೆಟ್​

himacha pradesh election
Published on

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಆಡಳಿತಾರೂಡ ಬಿಜೆಪಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದ್ದು, ಇದೀಗ ಶಿಮ್ಲಾ ನಗರ ಕ್ಷೇತ್ರಕ್ಕೆ ಚಹಾ ಮಾರುವ ವ್ಯಕ್ತಿಗೆ ಟಿಕೆಟ್​ ನೀಡಿದೆ!

ಹಿಮಾಚಲ ಪ್ರದೇಶ ರಾಜ್ಯದ 68 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ.12ರಂದು ಮತದಾನ ನಡೆಯಲಿದೆ. ಡಿ.8ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆ ಆಗುತ್ತಿದ್ದಂತೆ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯು ಚಹಾ ಮಾರುವವನಿಗೆ ಟಿಕೆಟ್​ ನೀಡಿ ಗಮನ ಸೆಳೆದಿದೆ.

ಶಿಮ್ಲಾ ನಗರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಿ ಸಚಿವ ಸುರೇಶ್​ ಭಾರದ್ವಾಜ್​ ಬದಲಿಗೆ ಚಹಾ ಅಂಗಡಿ ನಡೆಸುತ್ತಿರುವ ಸಂಜಯ್​ ಸೂದ್​ಗೆ ಟಿಕೆಟ್​ ನೀಡಿದೆ. ಸುರೇಶ್​ ಭಾರದ್ವಾಜ್​ಗೆ ಕಾಸುಂಪ್ತಿ ಕ್ಷೇತ್ರದಿಂದ ಟಿಕೆಟ್​ ನೀಡಲಾಗಿದೆ.

'ಶಿಮ್ಲಾ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ. ನನಗೆ ಟಿಕೆಟ್​ ಕೊಟ್ಟಿರುವುದಕ್ಕೆ ಬಹಳ ಋಣಿಯಾಗಿದ್ದೇನೆ. ಐದು ವರ್ಷ ವಿದ್ಯಾರ್ಥಿ ಪರಿಷತ್​ನಲ್ಲಿ ಕೆಲಸ ಮಾಡಿದ್ದ ನನ್ನಂತಹ ಸಣ್ಣ ಕಾರ್ಯಕರ್ತನನ್ನು ಗುರುತಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ' ಎಂದು ಸಂಜಯ್​ ಸೂದ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net