ಮುಳ್ಳೇರಿಯ ಕೊಟ್ಟಂಗುಳಿಯಲ್ಲಿ ಗಜಪಡೆಯ ದಿಬ್ಬಣ: ಕೃಷಿ ಚಿಂದಿಯಾಗುವ ಆತಂಕದಲ್ಲಿ ರೈತರು

web - kaadaane
Published on

ಕಾಸರಗೋಡು: ಕಾಡಾನೆ ದಾಳಿಯಿಂದ ಕಂಗೆಟ್ಟಿರುವ ಮುಳಿಯಾರು, ಕಾರಡ್ಕ ಪ್ರದೇಶದಲ್ಲಿ ಮತ್ತೆ ಆನೆಗಳು ಗುಂಪಾಗಿ ನಾಡಿಗಿಳಿದಿವೆ. ಇದರಿಂದಾಗಿ ಇಲ್ಲಿನ ಜನತೆ ಆತಂಕದಿಂದಲೇ ದಿನ ದೂಡುವಂತಾಗಿದೆ.

ಮನೆ ಅಂಗಳದಲ್ಲೇ ಘೀಳಿಡುವ ಕಾಡಾನೆಗಳು

ಕೊಟ್ಟಂಗುಳಿ ನಿವಾಸಿ ಚಂದ್ರನ್ ಎಂಬುವರ ರಬ್ಬರ್ ತೋಟಕ್ಕೆ ಆಗಮಿಸಿದ ಆನೆ, ನಂತರ ಮನೆ ಅಂಗಳಕ್ಕೆ ಬಂದು ಘೀಳಿಡುವ ಮೂಲಕ ಮನೆಯವರಲ್ಲಿ ಹಾಗೂ ಊರ ಜನರಲ್ಲಿ ಭೀತಿ ಸೃಷ್ಟಿಸಿದೆ. ತಕ್ಷಣ ನಾಗರಿಕರು ಒಟ್ಟಾಗಿ ಆಗಮಿಸಿ ಆನೆಯನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದರೂ, ಆನೆ ಗುಂಪು ಮತ್ತೆ ದಾಳಿ ನಡೆಸುವ ಭೀತಿಯಲ್ಲಿ ಊರಿನ ಜನತೆ ಕಾಲಕಳೆಯುವಂತಾಗಿದೆ.

ರೈತರ ನಿದ್ದೆಗೆಡಿಸಿದೆ ಕಾಡಾನೆ ಹಿಂಡು

ಗಜಪಡೆಯ ದಿಬ್ಬಣದಿಂದಾಗಿ ಇಲ್ಲಿನ ಕೃಷಿಕರು ಕಂಗಾಲಾಗಿದ್ದಾರೆ. ತಾವು ಕಷ್ಟಪಟ್ಟು ಬೆಳೆಸಿದ ಗಿಡ, ಮರಗಳು ಕಣ್ಣೆದುರೇ ಆನೆ ದಾಳಿಗೆ ಚಿಂದಿಯಾಗುವ ಆತಂಕ ಇಲ್ಲಿನ ರೈತರ ನಿದ್ದೆಗೆಡಿಸಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ ಎಂದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net