

Gautam Gambhir: ಗುರುವಾರ (ಜು.30) ಆರಂಭವಾಗುವ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ದಿ ಓವೆಲ್ ಮೈದಾನದ ಮುಖ್ಯ ಪಿಚ್ ಕ್ಯುರೇಟರ್ ಲೀ ಪೋರ್ಟಿಸ್ ಅವರೊಂದಿಗೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತೀವ್ರ ಮಾತಿನ ಚಕಮಕಿ ನಡೆಸಿದ್ದರೆಂದು ಎಂದು ವರದಿಯಾಗಿದೆ.
ಮಂಗಳವಾರ ಭಾರತ ತಂಡ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಲೀ ಮತ್ತು ಗಂಭೀರ್ ನಡುವೆ ಅಭ್ಯಾಸ ನಡೆಸುವ ಪಿಚ್ ಸೌಲಭ್ಯದ ಕುರಿತು ವಾಗ್ವಾದ ನಡೆದಿದೆ. ಪಿಚ್ ಕ್ಯುರೇಟರ್ ಲೀಗೆ ಕಡೆಗೆ ಬೆರಳು ಮಾಡಿದ ಗಂಭೀರ್, ನೀವು ನಮಗೆ ಏನು ಮಾಡಬೇಕೆಂದು ಹೇಳುವ ಅವಶ್ಯಕತೆಯಿಲ್ಲ ಎಂದು ಕೋಪದಿಂದ ಹೇಳಿದ್ದಾರೆ.
ಲೀ ಅವರೊಂದಿಗೆ ಸಂಭಾಷಣೆಯ ಸಮಯದಲ್ಲಿ ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಟೇಚ್ ಅವರು ಕೊಟರ್ ಅವರೊಂದಿಗೆ ಸೇರಿಕೊಂಡರು. ಆದರೆ, ಗಂಭೀರ್ ಇನ್ನೊಂದು ತುದಿಯಿಂದ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿದ್ದರು. ಲೀ ಗಂಭೀರ್ಗೆ ಒಂದೆರಡು ಮಾತು ಹೇಳಿ ಅಂತಿಮವಾಗಿ ಹೊರ ನಡೆದರು.
ಈ ಪರಿಸ್ಥಿಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ ಸಂದರ್ಭದಲ್ಲಿ ಮಾತನಾಡಿದ ಲೀ, ಅವರನ್ನು ಖುಷಿಯಾಗಿಡುವುದು ನನ್ನ ಕೆಲಸವಲ್ಲ. ನನಗೆ ಏನು ತಿಳಿದಿಲ್ಲ, ನೀವು ಅವರನ್ನೇ ಹೋಗಿ ಕೇಳಿ ಎಂದು ಗರಂ ಆಗಿದ್ದಾರೆ. (ಏಜೆನ್ಸೀಸ್)