ಟಿ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಿದ್ದೇ ತಪ್ಪಾಯಿತು! ನಡೆದೇ ಹೋಯಿತು ಘೋರ ದುರಂತ!

girl
Published on

ಲಖನೌ: ಹೆಣ್ಣು ಮಕ್ಕಳು ಕೆಲ ಡ್ರೆಸ್ ತೊಡುವುದುಕ್ಕೆ ಈಗಲೂ ಕೆಲ ಕುಟುಂಬಗಳಲ್ಲಿ ವಿರೋಧವಿದೆ. ಅದೇ ರೀತಿ ವಿರೋಧವಿದ್ದ ಮನೆಯಲ್ಲಿ ಬಾಲಕಿಯೊಬ್ಬಳು ಟಿ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟಳು ಎನ್ನುವ ಒಂದೇ ಕಾರಣಕ್ಕೆ ಆಕೆಯ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ದೇವಾರಿಯಾ ಪ್ರದೇಶದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಅಲ್ಲಿನ ನಿವಾಸಿಯಾಗಿದ್ದ ಬಾಲಕಿ ನೇಹಾ (16) ವ್ಯಾಸಂಗಕ್ಕೆಂದು ಲೂಧಿಯಾನಾದಲ್ಲಿ ತಂಗಿದ್ದಳು. ಅಲ್ಲಿ ಜೀನ್ಸ್, ಟಿ ಶರ್ಟ್ ಹಾಕಿ ಅಭ್ಯಾಸವಿದ್ದ ಆಕೆ ಇತ್ತೀಚೆಗೆ ಮನೆಗೆ ಬಂದಾಗಲೂ ಅದೇ ರೀತಿ ಜೀನ್ಸ್ ಮತ್ತು ಟಿ ಶರ್ಟ್ ಹಾಕಿದ್ದಾಳೆ. ಮನೆಯಲ್ಲಿ ಈ ರೀತಿ ಬಟ್ಟೆ ಹಾಕಬೇಡ ಎಂದು ಆಕೆಯ ಚಿಕ್ಕಪ್ಪ ಮತ್ತು ಅಜ್ಜ ಕೂಗಾಡಿದ್ದಾರೆ. ಈ ವಿಚಾರದಲ್ಲಿ ಜಗಳವೂ ಆಗಿದೆ.

ಜಗಳವಾಗಿ ಕೆಲ ಕಾಲದ ನಂತರ ಬಾಲಕಿ ಊರ ಹೊರಗಿನ ಸೇತುವೆಯಲ್ಲಿ ಹೆಣವಾಗಿ ನೇತಾಡುತ್ತಿರುವುದು ಕಂಡುಬಂದಿದೆ. ಯಾರೋ ಕೊಲೆ ಮಾಡಿ ಹೆಣ ಎಸೆದಿರುವುದು ಪೊಲೀಸರಿಗೆ ತಿಳಿದುಬಂದಿದೆ. ಈ ವಿಚಾರವಾಗಿ ಬಾಲಕಿಯ ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ನಾನಿಲ್ಲದ ಸಮಯದಲ್ಲಿ ನನ್ನ ಮಗಳ ಚಿಕ್ಕಪ್ಪ ಮತ್ತು ಅಜ್ಜ ಆಕೆಯನ್ನು ಕೊಲೆ ಮಾಡಿದ್ದಾರೆ. ಅವರೇ ಆಕೆಯ ದೇಹವನ್ನು ಅಲ್ಲಿ ಎಸೆದಿದ್ದಾರೆ ಎಂದು ಆಕೆ ದೂರಿನಲ್ಲಿ ದಾಖಲಿಸಿದ್ದಾಳೆ. ಸದ್ಯ ಪ್ರಕರಣ ತನಿಖೆಯ ಹಂತದಲ್ಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net