

ಚಾಮರಾಜನಗರ: ಜೂಜುಕೋರರ ಅಡ್ಡೆ ಮೇಲೆ ದಾಳಿ ಮಾಡಿ, ಜೂಜಾಟ ತಡೆಯಬೇಕಿದ್ದ ಪೊಲೀಸರೇ ಆ ಅಡ್ಡೆಯಲ್ಲಿ ಸಿಕ್ಕಿಬಿದ್ದರೇ... ಹೌದು ಇಂತಹ ವಿಲಕ್ಷಣ ಘಟನೆ ಚಾಮರಾಜನಗರದ ಕರಿನಂಜಪುರ ಬಳಿ ಸಂಭವಿಸಿದೆ.
ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ, ಕ್ಲಬ್ ನಡೆಸುತ್ತಿದ್ದ ತಹಸೀಲ್ದಾರ್ ಚಾಲಕ ಸೇರಿ 20 ಮಂದಿಯನ್ನು ಬಂಧಿಸಲಾಗಿದೆ. ಮೀಸಲು ಪಡೆಯ ಎಎಸ್ಐ ಪ್ರದೀಪ್, ಮುಖ್ಯಪೇದೆ ಮರಿಸ್ವಾಮಿ, ಚಾಮರಾಜನಗರ ತಹಸೀಲ್ದಾರ್ ಅವರ ಕಾರು ಚಾಲಕ ಕಮಲೇಶ್ ಹಾಗೂ ಇತರ 17 ಮಂದಿ ಬಂಧಿತರು. ಜೂಜಾಟಕ್ಕೆ ಪಣಕ್ಕಿಟ್ಟಿದ್ದ 29 ಸಾವಿರ ರೂ. ನಗದನ್ನು ಜಿಲ್ಲಾ ಪೊಲೀಸ್ ವಿಶೇಷ ತಂಡ ವಶಕ್ಕೆ ಪಡೆದಿದೆ. ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.