ಅಬ್ಬಬ್ಬಾ, ಕೋಡಿ ಬಿದ್ದ ಕೆರೆಯಲ್ಲಿ ಮೀನುಗಳ ನರ್ತನ..? ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

1342722
Published on

ತುಮಕೂರು: ಅಬ್ಬಬ್ಬಾ! ಈ ದೃಶ್ಯ ನೋಡಿದ್ರೆ ಅಚ್ಚರಿ ಆಗುತ್ತೆ. ಮೀನುಗಳೇನಾದರೂ ನೃತ್ಯ ಮಾಡುತ್ತಿವೆಯಾ? ಅನ್ಸೋದು ಗ್ಯಾರಂಟಿ.

ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ ನೂರಾರು ಕೆರೆಗಳು ಕೋಡಿಯಾಗಿವೆ. ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಈ ವೇಳೆ ಸಾವಿರಾರು ಮೀನುಗಳು ನೀರಿನಿಂದ ಮೇಲಕ್ಕೆ ಜಿಗಿದು ಮತ್ತೆ ನೀರಿಗೆ ಬೀಳುತ್ತಿರುವ ದೃಶ್ಯವೊಂದು ವೈರಲ್​ ಆಗಿದ್ದು, ನೆಟ್ಟಿಗರು ವ್ಹಾವ್​ ಎನ್ನುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲೂಕು ಬೆಳಗುಲಿ ಕೆರೆ ಕೋಡಿ ಬಿದಿದ್ದು, ಸ್ಥಳೀಯರು ಬೀಸಿದ ಬಲೆಗೆ ಸಾವಿರಾರು ಮೀನುಗಳು ಬಿದ್ದಿವೆ. ಮಳೆಯನ್ನೂ ಲೆಕ್ಕಿಸದೆ ಮತ್ಸ್ಯ ಬೇಟೆಯಲ್ಲಿ ನಿರತರಾದ ಜನರು ಮೀನುಗಳನ್ನ ಕಂಡು ಸಂತಸ ಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net