ಬದುಕಿನ ಪಯಣ ಮುಗಿಸಿದ ಸಂಚಾರಿ ವಿಜಯ್, ಅಂಗಾಂಗ ದಾನಕ್ಕೆ ನಿರ್ಧಾರ

sanchari vijay
Published on

ಬೆಂಗಳೂರು: ಜೂ.12ರ ರಾತ್ರಿ​ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ, ಸ್ಯಾಂಡಲ್​ವುಡ್​ ನಟ ಸಂಚಾರಿ ವಿಜಯ್​ ಅವರ ಮಿದುಳು ಇಂದು(ಸೋಮವಾರ) ಬೆಳಗ್ಗೆ 10 ಗಂಟೆಗೆ ನಿಷ್ಕ್ರಿಯಗೊಂಡಿದೆ.

ನೋವಿನಲ್ಲೂ ವಿಜಯ್ ಅವರ ದೇಹದ ಅಂಗಾಗ ದಾನ ಮಾಡಲು ಸಹೋದರರು ನಿರ್ಧರಿಸಿದ್ದು, ವಿಜಯ್ ಅಂಗಾಂಗ ಕಸಿ ಮಾಡುವ ಕಾರ್ಯ ನಡೆಯುತ್ತಿದೆ ಎಂದು 'ದಿಗ್ವಿಜಯ ನ್ಯೂಸ್'ಗೆ ಅಪೋಲೋ ಆಸ್ಪತ್ರೆ ನ್ಯೂರೋ ಸರ್ಜನ್ ಡಾ. ಶೈಲೇಶ್ ಕುಮಾರ್ ತಿಳಿಸಿದರು.

ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಬೈಕ್​ನಲ್ಲಿ ಹೋಗುತ್ತಿರುವಾಗ ಜೆಪಿ ನಗರದ 7ನೇ ಹಂತದಲ್ಲಿ ಅಪಘಾತವಾಗಿ ಸಂಚಾರಿ ವಿಜಯ್​ ತಲೆಗೆ ತೀವ್ರ ಪೆಟ್ಟಾಗಿತ್ತು. ಮೆದುಳಿನ ಬಲಭಾಗದಲ್ಲಿ ತೀವ್ರ ಗಾಯವಾಗಿ ರಕ್ತ ಸೋರುತ್ತಿದ್ದ ಹಿನ್ನೆಲೆ ಅವರರಿಗೆ ಬನ್ನೇರುಘಟ್ಟ ರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿ ಐಸಿಯುನಲ್ಲಿ ಇರಿಸಲಾಗಿತ್ತು. ಕೋಮದಲ್ಲಿದ್ದ ವಿಜಯ್​ರ ಬ್ರೈನ್ ಫಂಕ್ಷನ್ ನಿಂತು ಹೋಗಿತ್ತು. ಟ್ರೀಟ್​ಮೆಂಟ್​ಗೆ ಅವರು ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದರು. ಮಿದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net