ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ​ ನಿಧನ

ambuja
Published on

ಬೆಂಗಳೂರು: ಕನ್ನಡ ಸಿನಿಮಾ ರಂಗದ ಹಿರಿಯ ನಟ ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ ನಿಧನರಾದರು.

ಅಂಬುಜಾ ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವರ್ಷಗಳಿಂದ ಅವರಿಗೆ ಮಂಡಿ ನೋವಿನ ಸಮಸ್ಯೆಯೂ ಕಾಡುತ್ತಿತ್ತು. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಶುಕ್ರವಾರ ಮಧ್ಯಾಹ್ನ ಎಚ್​.ಎಸ್​.ಆರ್​. ಲೇಔಟ್​ನಲ್ಲಿ ಕೊನೆಯುಸಿರೆಳೆದರು. ಇದನ್ನೂ ಓದಿರಿ ಸಿಎಂ ಯಡಿಯೂರಪ್ಪಗೆ ಮತ್ತೆ ಕರೊನಾ ಪಾಸಿಟಿವ್​! ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ್​ಗೆ ಶಿಫ್ಟ್

ದ್ವಾರಕೀಶ್​ಗೆ ಇಬ್ಬರು ಪತ್ನಿಯರು. ಅಂಬುಜಾ ಮೊದಲನೆಯವರು. ದ್ವಾರಕೀಶ್​ 51ನೇ ವರ್ಷದಲ್ಲಿ ಶೈಲಜಾ ಎಂಬುವರ ಜತೆ ಎರಡನೇ ಮದುವೆ ಆಗುತ್ತಾರೆ. ಇದಕ್ಕೆ ಅಂಬುಜಾ ಅವರ ಸಂಪೂರ್ಣ ಒಪ್ಪಿಗೆ ಇತ್ತಂತೆ. ಈ ಬಗ್ಗೆ ಹಲವು ವೇದಿಕೆಗಳಲ್ಲಿ ಸ್ವತಃ ದ್ವಾರಕೀಶ್​ ಅವರೇ ಹೇಳಿಕೊಂಡಿದ್ದಾರೆ. 'ಅಂಬುಜಾ.. ಐ ಹ್ಯಾವ್ ಲವ್ ವಿತ್ ಒನ್ ಲೇಡಿ' ಎಂದು ನನ್ನ ಪತ್ನಿಗೆ ಹೇಳಿದೆ. ಅದಕ್ಕೆ ಉತ್ತರಿಸಿದ್ದ ಅಂಬುಜಾ, 'ದ್ವಾರ್ಕಿ ನೀನು ಯಾವುದನ್ನು ಇಷ್ಟಪಡ್ತೀಯಾ ಅದನ್ನು ನಾನೂ ಇಷ್ಟಪಡ್ತೀನಿ' ಎಂದಿದ್ದನ್ನು ದ್ವಾರಕೀಶ್​ ಸ್ಮರಿಸಿಕೊಂಡಿದ್ದರು. 'ಅಂಬುಜಾ ಮತ್ತು ಶೈಲಾಜಾ ಜೊತೆಜೊತೆಗೆ ಇದ್ದೇನೆ. ನನ್ನ ಜೀವನ ಹೀಗೆ ಸಾಗುತ್ತಿದೆ' ಎಂದು ಹೇಳಿಕೊಂಡಿದ್ದರು. ದ್ವಾರಕೀಶ್​ರ ಆಸೆ-ಆಕಾಂಕ್ಷೆಗಳಿಗೆ ಎಂದೂ ಅಡ್ಡಿಯಾಗದ ಅಂಬುಜಾ ಇಂದು ಇಹಲೋಕ ತ್ಯಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net