ಬಲವಂತವಾಗಿ ಮಗಳಿಗೆ ಮದುವೆ ಮಾಡಿಸಿದ ತಂದೆ; ನಂತರ ನಡೆದಿದ್ದು ಮಾತ್ರ…!

Marriage Symbolic
Published on

ಬೆಂಗಳೂರು: "ನನ್ನ ತಂದೆಯೇ ನಮ್ಮ ಪಾಲಿನ ಹೀರೋ" ಎಂದು ಹೇಳುವ ಹೆಣ್ಣು ಮಕ್ಕಳೇ ಹೆಚ್ಚು. ಆದರೆ ಇಲ್ಲೊಬ್ಬಳು ಬಾಲಕಿ ತನ್ನ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, 16 ವರ್ಷದ ಬಾಲಕಿಗೆ ತಂದೆಯೇ ವಿಲನ್ ಆದ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆಯ ವಿವರ: ಬಲವಂತವಾಗಿ ಬಾಲಕಿಗೆ ಮದುವೆ ಮಾಡಿಸಿರುವ ಕಾರಣ ತಂದೆ ಹಾಗೂ ಮದುವೆ ಆದ ವ್ಯಕ್ತಿ ಮೇಲೆ ಬಾಲಕಿ ದೂರು ನೀಡಿದ್ದಾಳೆ. ಬಾಲಕಿ ದೂರಿನ ಮೇಲೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ತಪ್ಪಿಸಿಕೊಂಡ ಬಾಲಕಿ
ಈಗಾಗಲೇ ಮದುವೆಯಾಗಿದ್ದ ವ್ಯಕ್ತಿ ಜೊತೆಗೆ ದೇವಸ್ಥಾನದಲ್ಲಿ ಬಲವಂತವಾಗಿ ಮದುವೆ ಮಾಡಿಸಲಾಗಿತ್ತು. ಆದರೆ ಈ ಮದುವೆಗೆ ಬಾಲಕಿ ಒಪ್ಪಿರಲಿಲ್ಲ. ಬಳಿಕ ಬೆಳ್ಳಂದೂರಿನ ಸಮೀಪ ಮನೆಯಲ್ಲಿ ಕೂಡಿ ಹಾಕಲಾಗಿತ್ತು. ಈ ವೇಳೆ ಮದುವೆಯಾದ ವ್ಯಕ್ತಿ ದೈಹಿಕ ಸಂಪರ್ಕ ಮಾಡಲು ಪ್ರಯತ್ನ ಮಾಡಿದಾಗ ಆತನಿಂದ ತಪ್ಪಿಸಿಕೊಂಡು ಕಂಟ್ರೋಲ್ ರೂಂಗೆ ಬಾಲಕಿ ಕರೆ ಮಾಡಿದ್ದಾಳೆ. ಇದೀಗ ಬೆಳ್ಳಂದೂರು ಪೊಲೀಸರಿಂದ ಬಾಲಕಿ ರಕ್ಷಣೆ ಮಾಡಲಾಗಿದೆ. ಪೊಲೀಸರು ಮದುವೆಯಾಗಿದ್ದ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿ ತಂದೆಗಾಗಿ ಹುಡುಕಾಟ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net