More

    ಬೋರ್‌ವೆಲ್ ಕೊರೆಸಿ ನೀರಿನ ದಾಹ ತೀರಿಸಿದ ಆಂಧ್ರಪ್ರದೇಶದ ರೈತ

    ನಾಲತವಾಡ: ಸಾರ್ವಜನಿಕರು, ರೈತರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ದಾಹ ನೀಗಿಸುವ ಉದ್ದೇಶದಿಂದ ಆಂಧ್ರಪ್ರದೇಶದ ರೈತ ನಾಲತವಾಡ ಸಂಪರ್ಕದ ಬಲದಿನ್ನಿ ರಸ್ತೆಯಲ್ಲಿ ಸ್ವತಃ ಖರ್ಚಿನಿಂದ ಬೋರ್‌ವೆಲ್ ಕೊರೆಸಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಪಟ್ಟಣದಲ್ಲಿ ಕೃಷಿ ಮಾಡಿಕೊಂಡು ಬೀಡು ಬಿಟ್ಟಿರುವ ಜಿ. ವೆಂಕಟೇಶರಾವ್ ಬೈಲು ಹನುಮಾನ ದೇಗುಲದ ಪಕ್ಕದಲ್ಲಿ ಬೋರ್‌ವೆಲ್ ಕೊರೆಸಿ ನೀರು ಹರಿಸಿ ಪುಣ್ಯಕಟ್ಟಿಕೊಂಡ ರೈತ. ನಾಲತವಾಡದಿಂದ 7ಕಿ.ಮೀ. ವರೆಗೂ ಎಲ್ಲಿಯೂ ಕುಡಿಯುವ ನೀರಿನ ಸೌಲಭ್ಯವಿಲ್ಲ ಎಂದು ಗಮನಿಸಿದ ಅವರು ಸಾರ್ವಜನಿಕರು, ರೈತರ ನೀರಿನ ದಾಹ ತೀರಿಸುವ ಪಣತೊಟ್ಟಿದ್ದರು.

    ಇದನ್ನೂ ಓದಿ : ಶುಶ್ರೂಷಕ ಸೇವೆ ಅಗ್ರಣೀಯ: ಡಾ. ವಿಜಯಮಹಾಂತೇಶ ದಾನಮ್ಮನವರ

    ಬಲದಿನ್ನಿ ನಾಲತವಾಡ ರಸ್ತೆಯ ಅಕ್ಕಪಕ್ಕದ ರೈತರು ಹಾಗೂ ಸಾರ್ವಜನಿಕರು ಕುಡಿಯುವ ನೀರಿಗೆ ಪರದಾಡುವಂತಾಗಿತ್ತು. ನಿತ್ಯ ನೂರಾರು ವಾಹನಗಳು ಹಾಗೂ ಇದೇ ರಸ್ತೆಗೆ ಹೊಂದಿಕೊಂಡ ಸಾವಿರಾರು ಹೆಕ್ಟೇರ್ ಪ್ರದೇಶದ ರೈತರು ನೀರಿಗಾಗಿ ಅಲೆಯುತ್ತಿದ್ದರು. ನಿರ್ಜನ ಪ್ರದೇಶವಾಗಿರುವ ಈ ರಸ್ತೆಯುದ್ದಕ್ಕೂ ಕುಡಿಯುವ ನೀರಿನ ಸೌಲಭ್ಯವಾಗಲಿ ಅಥವಾ ಒಂದೇ ಒಂದು ಕೈಪಂಪ್ ಇರಲಿಲ್ಲ. ಇದನ್ನು ಮನಗಂಡ ಆಂಧ್ರಪ್ರದೇಶದ ರೈತ ಬೋರ್‌ವೆಲ್ ಕೊರೆಸಿ ನೀರು ಹರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಸರ್ಕಾರ ಅಥವಾ ಜನಪ್ರತಿನಿಧಿಗಳು ಮಾಡದ ಪುಣ್ಯದ ಕೆಲಸವನ್ನು ಆಂಧ್ರದ ರೈತ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಬಲದಿನ್ನಿ ರಸ್ತೆಯಲ್ಲಿ ಸುಪ್ರಸಿದ್ಧ ಬೈಲು ಹನುಮಾನ ದೇಗುಲವಿದೆ. ಹಲವರ ಇಷ್ಟಾರ್ಥ ಪೂರೈಸಿದ ಬೈಲು ಹನುಮಾನನ ಸಹಸ್ರ ಭಕ್ತರೂ ಇದ್ದಾರೆ. ಆದರೆ ಈ ಭಾಗದಲ್ಲಿ ನಿತ್ಯ ಸಾವಿರಾರು ಜನ ಸಂಚರಿಸುತ್ತಿದ್ದರೂ ಸರ್ಕಾರದಿಂದಾಗಲಿ ಅಥವಾ ಸ್ಥಳೀಯ ದಾನಿಗಳಾಗಲಿ ನೀರಿನ ತೊಂದರೆ ನೀಗಿಸುವ ನಿಟ್ಟಿನಲ್ಲಿ ಬೋರ್‌ವೆಲ್ ಕೊರೆಸುವ ಆಲೋಚನೆ ಮಾಡಿರಲಿಲ್ಲ. ಸದ್ಯ ಎಲ್ಲರೂ ಮೆಚ್ಚುವಂತೆ ಪುಣ್ಯದ ಕೆಲಸ ಮಾಡಿದ ಆಂಧ್ರದ ರೈತ ಜಿ. ವೆಂಕಟೇಶರಾವ್ ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

    ಕಳೆದ ಹಲವು ವರ್ಷಗಳಿಂದಲೂ ಇದೇ ಭಾಗದಲ್ಲಿ ಜಮೀನುಗಳನ್ನು ಲೀಜ್ ಪಡೆದುಕೊಂಡಿದ್ದೇನೆ. ಹನುಮಾನ ದೇವರ ಆಶೀರ್ವಾದದಿಂದ ಕೃಷಿಯಲ್ಲಿ ಲಾಭ ಕಂಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆಯನ್ನು ಈ ರಸ್ತೆಯಲ್ಲಿನ ಸ್ಥಳೀಯ ರೈತರು, ಜಾನುವಾರುಗಳು ಹಾಗೂ ವಾಹನ ಸವಾರರು ಅನುಭವಿಸುತ್ತಿದ್ದುದ್ದನ್ನು ಸೂಕ್ಷ್ಮವಾಗಿ ಪರಿಗಣಿಸಿ ಬೋರ್‌ವೆಲ್ ಕೊರೆಸಿದ್ದೇನೆ.
    ಜಿ. ವೆಂಕಟೇಶರಾವ್, ಆಂಧ್ರಪ್ರದೇಶದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts