More

    ಹುಟ್ಟುಹಬ್ಬ ಆಚರಿಸಿಕೊಂಡ ಮರುದಿನವೇ ಜಮೀರ್​ ‘ಸಾಮ್ರಾಜ್ಯ’ದ ಮೇಲೆ ‘ಇಡಿ’ ದಾಳಿ! ಶಾಸಕನ ಆಸ್ತಿ ಕೇಳಿದ್ರೆ ಬೆರಗಾಗ್ತೀರಿ…

    ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ ಸಾಮ್ರಾಜ್ಯದ ಮೇಲೆ ಇಂದು ಬೆಳ್ಳಂಬೆಳಗ್ಗೆ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ನಿನ್ನೆ(ಬುಧವಾರ) ತಾನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಶಾಸಕರಿಗೆ ಮರುದಿನ ಬೆಳ್ಳಗ್ಗೆಯೇ ಇಡಿ ಶಾಕ್​ ಕೊಟ್ಟಿದೆ. ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್​ ಬಳಿ ಇರುವ ಜಮೀರ್ ಅಹ್ಮದ್ ಅವರ ಐಷಾರಾಮಿ ಬೃಹತ್​ ಬಂಗಲೆ, ಶಾಂತಿ ನಗರದಲ್ಲಿರುವ ಮನೆ, ಚಾಮರಾಜಪೇಟೆಯಲ್ಲಿರುವ ಸ್ವಂತ ಕಚೇರಿ, ಪ್ಲ್ಯಾಟ್‌ಗಳು, ಬಂಬೂ ಬಜಾರ್ ಬಳಿಯ ಮನೆ, ನ್ಯಾಷನಲ್ ಟ್ರಾವೆಲ್ಸ್ ಮುಖ್ಯ ಕಚೇರಿ… ಹಲವಡೆ ಏಕಕಾಲಕ್ಕೆ ಇಡಿ ದಾಳಿ ಆಗಿದೆ. ಜಮೀರ್​ ಹೆಸರಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಶ್ರೀಲಂಕಾ ಮತ್ತು ಗೋವಾದಲ್ಲಿ ಕ್ಯಾಸಿನೊ ಕ್ಲಬ್, ಮುಂಬೈನಲ್ಲಿ ಒಂದು ಮನೆ, ಹೈದರಾಬಾದ್ ಸೇರಿದಂತೆ ಹಲವು ಕಡೆ ಆಸ್ತಿ, ಬೆಂಗಳೂರಿನ ಮೇಕ್ರಿ ಸರ್ಕಲ್ ಬಳಿ ಒಂದು ಅಪಾರ್ಟ್‌ಮೆಂಟ್, ಯುಬಿ ಸಿಟಿಯಲ್ಲಿ ಒಂದು ಅಪಾರ್ಟ್‌ಮೆಂಟ್, ಹೆಬ್ಬಾಳದಲ್ಲಿ ಆಳಿಯನ ಮನೆ ಇದೆ. ಏಕಕಾಲಕ್ಕೆ ನಗರದ ಹಲವಡೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ಕೆಲ ವರ್ಷಗಳಿಂದ ಜಮೀರ್ ಆದಾಯದ ಮೇಲೆ ಕಣ್ಣಿಟ್ಟಿದ್ದ ಇಡಿ, ಇತ್ತೀಚಿನ ದಿನಗಳಲ್ಲಿ ಜಮೀರ್ ಆಡಂಬರದ ಕುರಿತು ಮಾಹಿತಿ ಸಂಗ್ರಹಿಸಿತ್ತು ಎನ್ನಲಾಗಿದೆ.

    • ಜಮೀರ್ ಒಡೆತನದ ಬೃಹತ ಬಂಗಲೆ
    • ಜಮೀರ್ ಬಿಸಿನೆಸ್​ಗಳು
    • ಅದ್ದೂರಿಯಾಗಿ ನಡೆದಿದ್ದ ಜಮೀರ್ ಮಗಳ ಮನೆ
    • ಜಮೀರ್ ಮಗನ ಸಿನಿಮಾ ಬಗ್ಗೆಯೂ ಮಾಹಿತಿ ಸಂಗ್ರಹ
    • ಜಮೀರ್ ಆಪ್ತರ ಐಷಾರಾಮಿ ಜೀವನದ ಬಗ್ಗೆಯೂ ನಿಗಾ
    • ತಮ್ಮನ್ನು ಕಾಣಲು ಬರುವ ಸಾರ್ವಜನಿಕರಿಗೆ ಜಮೀರ್ ಏಕಾಏಕಿ ಹಣ ಕೊಟ್ಟು ಕಳುಹಿಸುತ್ತಿದ್ದ ವಿಚಾರ…
      ಇವೆಲ್ಲದ್ದರ ಬಗ್ಗೆ ಕೆಲ ದಾಖಲೆ ಸಂಗ್ರಹಿಸಿದ ಇಡಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

    ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

    ಬೈಕ್​ಗಾಗಿ ಪ್ರಾಣವನ್ನೇ ಬಿಟ್ಟ 21ರ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts