ಡಿಕೆಶಿಗೆ ಮತ್ತೆ ಎದುರಾಯ್ತು ಸಂಕಷ್ಟ! ಚಾರ್ಜ್​ಶೀಟ್​ ಸಲ್ಲಿಸಿದ ಇಡಿ

dks
Published on

ಬೆಂಗಳೂರು: ನಿರಂತರ ಆದಾಯ ಹೆಚ್ಚಳ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಿರುದ್ಧ ಇಡಿ ಅಧಿಕಾರಿಗಳು ಗುರುವಾರ ದೆಹಲಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

ಬೆಂಗಳೂರು ನಿವಾಸ ಸೇರಿದಂತೆ ದೆಹಲಿ, ಮುಂಬೈ ಸೇರಿ ಹಲವು ನಗರಗಳಲ್ಲಿ ಆಸ್ತಿ ಸಂಪಾದನೆ, ಹಲವು ವರ್ಷಗಳಿಂದ ನಿರಂತರ ಆದಾಯ ಹೆಚ್ಚಳ ಆರೋಪದ ಮೇಲೆ ಈ ಹಿಂದೆ ಇಡಿ ದಾಳಿ ಆಗಿತ್ತು. ದಾಖಲೆ ಸಂಗ್ರಹದ ಸಮಯದಲ್ಲಿ ಡಿಕೆಶಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಜಾಮೀನು ಪಡೆದು ಜೈಲಿನಿಂದ ಡಿಕೆಶಿ ಹೊರ ಬಂದಿದ್ದರು. ಈ ಪ್ರಕರಣ ಸಂಬಂಧ ಇಂದು(ಗುರುವಾರ) ಇಡಿ ಅಧಿಕಾರಿಗಳು ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.

ಚಾರ್ಜ್​ಶೀಟ್​ನಲ್ಲಿ ಮೇಲ್ನೋಟಕ್ಕೆ ಆರೋಪಿ ಪ್ರಭಾವಿ. ಹಾಗಾಗಿ ಜಾಮೀನು ರದ್ದುಗೊಳಿಸಿ ಎಂದು ಇಡಿ ಪ್ರಸ್ತಾಪ ಮಾಡಿದ್ರೆ ಡಿಕೆಶಿಗೆ ಮತ್ತೆ ಸಂಕಷ್ಟ ಎದುರಾಗಬಹುದು. ಸಾರ್ವತ್ರಿಕ ಚುನಾವಣೆಗೆ ಇನ್ನು ಹನ್ನೊಂದು ತಿಂಗಳು ಮಾತ್ರ ಬಾಕಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net