ಶಿವಮೊಗ್ಗದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ತಾಯಿ-ಮಗು ಬಲಿ: ಪ್ರೀತಿಸಿ ಮದ್ವೆಯಾದವಳ ಬಾಳಲ್ಲಿ ದುರಂತ

dowry case
Published on

ಶಿವಮೊಗ್ಗ: ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ನಲುಗಿದ ಮಹಿಳೆಯೊಬ್ಬರು 4 ವರ್ಷದ ಮಗನ ಜತೆ ಸಾವಿನ ಮನೆಯ ಕದ ತಟ್ಟಿದ್ದಾರೆ.

ಕಪ್ಪಗಳಲೆ ಗ್ರಾಮದ ಶರತ್ ಎಂಬುವರ ಪತ್ನಿ ನಯನ(27) ಮತ್ತು ಮಗ ಗುರುರಾಜ(4) ಮೃತ ದುರ್ದೈವಿಗಳು. 5 ವರ್ಷದ ಹಿಂದೆ ಶರತ್ ಮತ್ತು ನಯನಾ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇತ್ತೀಚಿಗೆ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು.

ಪ್ರೀತಿಸಿ ಮದುವೆಯಾದ ದಂಪತಿಗೆ ಮುದ್ದಾದ ಮಗು ಇತ್ತು. ಸಂಸಾರ ಚೆನ್ನಾಗಿಯೇ ನಡೆಯುತ್ತಿದೆ ಎನ್ನುವಾಗ ವರದಕ್ಷಿಣೆ ಎಂಬ ಭೂತ ಗಂಡನಿಗೆ ಹೊಕ್ಕಿತ್ತು ಎನ್ನಲಾಗಿದೆ.

ಇದೇ ವಿಚಾರಕ್ಕೆ ಪತ್ನಿ ಜತೆ ಪದೇಪದೆ ಜಗಳ ತೆಗೆಯುತ್ತಿದ್ದನಂತೆ. ಮನನೊಂದ ನಯನ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗನಿಗೆ ನೇಣುಬಿಗಿದು, ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ. ಮಗಳು ಮತ್ತು ಮೊಮ್ಮಗನ ಸಾವಿಂದ ಕಂಗೆಟ್ಟ ನಯನಾಳ ತಂದೆ ನಾಗರಾಜ್, ಸೊರಬ ಪೊಲೀಸ್ ಠಾಣೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net