ತಾವರೆ ಎಲೆಯಲ್ಲಿ ಊಟ ಸವಿದ ಶಾಸಕ, ಮಾಜಿ ಎಂಎಲ್ಸಿ! ಆಬಲವಾಡಿಗೆ ಆಗಮಿಸಿದ ಸಹಸ್ರಾರು ಭಕ್ತರು

Aablavadi village tempel topinaThimmappa
Published on

ಮಂಡ್ಯ: ಮದ್ದೂರು ತಾಲೂಕು ಆಬಲವಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ತೋಪಿನ ತಿಮ್ಮಪ್ಪನ ಹರಿಸೇವೆ ಶನಿವಾರ ವಿಜೃಂಭಣೆಯಿಂದ ನಡೆಯಿತು. ಈ ಹಿನ್ನೆಲೆ ಭಾನುವಾರ ಬೆಳಗ್ಗೆ ಪ್ರಸಾದದ ರೂಪದಲ್ಲಿ ಭಕ್ತರಿಗೆ ತಾವರೆಎಲೆ ಮೇಲೆ ಊಟ ನೀಡಲಾಯಿತು.

ನಾಗಮಂಗಲ ಶಾಸಕ ಸುರೇಶ್‌ಗೌಡ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಭಕ್ತರೊಂದಿಗೆ ದೇವರ ಪ್ರಸಾದ ಸ್ವೀಕರಿಸಿದರು. ದೇವರ ಹರಿಸೇವೆ ಕಾರ್ಯಕ್ರಮಗಳಿಗೆ ಇಸ್ತ್ರಿ ಹಾಗೂ ಬಾಳೆ ಎಲೆಗಳಲ್ಲಿ ಊಟ ನೀಡುವುದು ಸಾಮಾನ್ಯ. ಆದರೆ, ತೋಪಿನ ತಿಮ್ಮಪ್ಪನ ಹರಿಸೇವೆ ತಾವರೆ ಎಲೆಯಲ್ಲಿ ಊಟ ನೀಡಲಾಗುತ್ತದೆ.

ತಿಮ್ಮಪ್ಪನಿಗೆ ತಾವರೆ ಇಷ್ಟ ಎಂಬ ಕಾರಣಕ್ಕೆ ಭಕ್ತರಿಗೆ ದೇಗುಲದ ಆವರಣದಲ್ಲಿ ತಾವರೆ ಎಲೆಯಲ್ಲಿ ಅನ್ನಸಂತರ್ಪಣೆ ಆಯೋಜಿಸುವುದು ಅತ್ಯಂತ ವಿಶೇಷ. ಹರಿಸೇವೆಗೆ ಜಿಲ್ಲೆ ಹಾಗೂ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ತಾವರೆ ಎಲೆಯಲ್ಲಿ ಊಟ ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net