

ಮಂಗಳೂರು: ಮಹಿಳಾ ಅಧಿಕಾರಿಗೆ ಬಿಜೆಪಿ ಮುಖಂಡನೊಬ್ಬ 'ಕಾಂಗ್ರೆಸ್ನ ನಾಯಿ' ಎಂದು ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.
ಮಂಗಳೂರು ಹೊರವಲಯದ ಮುಡಿಪು ಎಂಬಲ್ಲಿ ಈ ಘಟನೆ ಸಂಭವಿಸಿದೆ. ಕರ್ನಾಟಕ ಜಲಮಂಡಳಿ ಇಂಜಿನಿಯರ್ ಶೋಭಾಲಕ್ಷ್ಮೀ ಎಂಬುವವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಸುತ್ತಿದ್ದರು. ಸ್ಥಳಕ್ಕೆ ಬಂದ ಸ್ಥಳೀಯ ಬಿಜೆಪಿ ಮುಖಂಡ, ವಕೀಲ ಅಸ್ಗರ್ ಮುಡಿಪು ಎಂಬುವವರು ಕಾಮಗಾರಿಯ ಆರ್ಡರ್ ಕಾಪಿ ಕೊಟ್ಟು ಕೆಲಸ ಮಾಡಿ. ಬಿಜೆಪಿಯ ಒಬ್ಬನೇ ಸಾಕು ಕಾಂಗ್ರೆಸ್ನ ನೂರು ಮಂದಿಗೆ. ನೀವು ಕಾಂಗ್ರೆಸ್ನ ನಾಯಿ, ಎಂಜಲು ತಿಂದು ಸರ್ಕಾರಕ್ಕೆ ಕಪ್ಪುಚುಕ್ಕೆ ತಂದವರು. ಕಾಂಗ್ರೆಸ್ನ ಒಬ್ಬ ನಾಯಿ ಇಲ್ಲಿ ಗುಂಡಿ ತೆಗೆದು ವಂಚನೆ ಮಾಡಿದ್ದಾನೆ. ನಾನೀಗ ಕೋರ್ಟ್ಗೆ ಹೋಗುತ್ತೇನೆ, ನೀವು ಕೇಸ್ ದಾಖಲಿಸಿ ಬೇಕಿದ್ದರೆ ಎಂದು ಅವಾಜ್ ಹಾಕಿದ್ದಾರೆ. ಇದನ್ನೂ ಓದಿರಿ ಗಾಂಧೀಜಿ ಅವರ ಮರಿಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ದಕ್ಷಿಣ ಆಫ್ರಿಕಾ!
ಬಿಜೆಪಿ ಮುಖಂಡನ ಬೈಗುಳದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಅವಾಚ್ಯವಾಗಿ ನಿಂದಿಸಿದವನ ವಿರುದ್ಧ ಮಹಿಳಾ ಅಧಿಕಾರಿಯು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಮಂಗಳೂರು ಶಾಸಕ ಯು.ಟಿ.ಖಾದರ್ ಅನುದಾನದಡಿ ಕಾಮಗಾರಿ ನಡೆಯುತ್ತಿತ್ತು.