ಹಾರಾಟ ನಡೆಸಿದ ಕೆಲವೇ ಕ್ಷಣದಲ್ಲಿ ಅಲುಗಾಡಿತು ವಿಮಾನದ ಇಂಜಿನ್​, ಪೈಲೆಟ್​​ ಜಾಗರೂಕತೆಯಿಂದ ತಪ್ಪಿತು ಭಾರೀ ದುರಂತ!

Indigo
Published on

ನವದೆಹಲಿ: ಹಾರಾಟ ನಡೆಸಿದ ಕೆಲವೇ ಕ್ಷಣದಲ್ಲಿ ಇಂಡಿಗೋ ವಿಮಾನದ ಇಂಜಿನ್​ ಕಂಪಿಸಿದ್ದರಿಂದ ಕೂಡಲೇ ಮಾರ್ಗ ಬದಲಾಯಿಸಿ ತುರ್ತು ಲ್ಯಾಂಡಿಂಗ್​ ಮಾಡಲಾಗಿದ್ದು, ಮುಂದಾಗಬಹುದಾದ ಅನಾಹುತವೊಂದು ತಪ್ಪಿದೆ.

ಗುರುವಾರ ಮಧ್ಯರಾತ್ರಿ ಈ ದೆಹಲಿಯಿಂದ ವಡೋದರಾಗೆ ಹಾರಾಟ ನಡೆಸಿದ್ದ ವಿಮಾನ ಕೆಲವೇ ಕ್ಷಣದಲ್ಲಿ ಇಂಜಿನ್​ ಕಂಪಿಸಿದ್ದರಿದಂದ ಜೈಪುರದ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿಗ್​ ಮಾಡಲಾಯಿತು. ಸದ್ಯ ಈ ಬಗ್ಗೆ ವಿಮಾನಯಾನ ಸಚಿವಾಲಯ ತನಿಖೆಗೆ ಆದೇಶಿಸಿದೆ. ಇಂಜಿನ್​ ಕಂಪಿಸಿದ ತಕ್ಷಣವೇ ಎಚ್ಚೆತ್ತ ಪೈಲೆಟ್​​ ವಿಮಾನ ನಿಲ್ದಾಣಕ್ಕೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಜೈಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ವ್ಯವಸ್ಥೆ ಮಾಡಲಾಯಿತು.

ಸದ್ಯ ಇಂಜಿನ್​ ಅಲುಗಾಡಲು ಕಾರಣವೇನು, ಹಾರಾಟಕ್ಕೂ ಮುನ್ನ ಪರಿಶೀಲನೆ ನಡೆಸಲಾಗಿರಲಿಲ್ಲವೇ ಎಂದು ಪ್ರಸ್ನಿಸಿರುವ ಡಿಜಿಸಿಎ ಸಂಪೂರ್ಣ ವರದಿ ನೀಡಬೇಕು ಎಂದಿದ್ದು, ತನಿಖೆಗೂ ಆದೇಶಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net