ಸಮುದ್ರಯಾನ ನಡೆಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್

Defense Minister Rajnath Singh Navigation in-karawara
Published on

ಕಾರವಾರ: ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರು ಜಲಾಂತರ್ಗಾಮಿ ಐಎನ್​ಎಸ್ ಖಂಡೇರಿಯಲ್ಲಿ ಶುಕ್ರವಾರ ಸಮುದ್ರಯಾನ ನಡೆಸಿದರು.

ದೇಶದ ಪ್ರತಿಷ್ಠಿತ ನೌಕಾ ನೆಲೆಯಾದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ 2 ದಿನದ ಕಾರ್ಯಕ್ರಮ ನಿಮಿತ್ತ ಗುರುವಾರ ಆಗಮಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರೊಂದಿಗೆ ಸಂವಾದ ನಡೆಸಿದ್ದರು. ಶುಕ್ರವಾರ ಸಮುದ್ರಯಾನ ನಡೆಸಿದರು.

2019ರಲ್ಲಿ ಸ್ವತಃ ರಾಜನಾಥ ಸಿಂಗ್ ಅವರೇ ಈ ಜಲಾಂತರ್ಗಾಮಿಯನ್ನು ಲೋಕಾರ್ಪಣೆ ಮಾಡಿದ್ದರು. ಸಂಪೂರ್ಣ ಭಾರತೀಯ ತಂತ್ರಜ್ಞಾನದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಮುಂಬೈನ ಅಜಗಾಂವ್ ಡಾಕ್ ಯಾರ್ಡ್ ನಲ್ಲಿ ಈ ಜಲಾಂತರ್ಗಾಮಿ ನಿರ್ಮಾಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net