

ನವದೆಹಲಿ: ನಿನ್ನೆಯಷ್ಟೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಬೆನ್ನಲ್ಲೇ ಅವರ ಪುತ್ರಿ ಪ್ರಿಯಾಂಕಾ ವಾದ್ರಾ ಅವರಿಗೂ ಕರೊನಾ ಸೋಂಕು ತಗುಲಿದೆ.
ಸದ್ಯ ಇಬ್ಬರು ಮನೆಯಲ್ಲೇ ಪ್ರತ್ಯೇಕ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಗೆ ಕರೊನಾ ಪಾಸಿಟಿವ್ ಬಂದಿದ್ದು, ತಮ್ಮ ಸಂಪರ್ಕಕ್ಕೆ ಬಂದವರು ಕೂಡಲೇ ಪರೀಕ್ಷೆಗೊಳಗಾಗಬೇಕೆಂದು ಸ್ವತಃ ಪ್ರಿಯಾಂಕಾ ವಾದ್ರಾ ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆಗೊಳಪಟ್ಟಿದೆ. ನನಗೂ ಕರೊನಾ ದೃಢವಾಗಿದ್ದು, ದಯವಿಟ್ಟು ಕೆಲ ದಿನಗಳಿಂದ ನನ್ನನ್ನು ಭೇಟಿಯಾದವರು ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಲಖನೌನಲ್ಲಿ ಆಯೋಜಿಸಲಾಗಿದ್ದ, ನವ ಸಂಕಲ್ಪ ಯಾತ್ರೆಯಲ್ಲಿ ಪ್ರಿಯಾಂಕಾ ವಾದ್ರಾ ಪಾಲ್ಗೊಂಡಿದ್ದರು.ಅಲ್ಲಿಂದ ದಿಲ್ಲಿಗೆ ವಾಪಸ್ಸಾದ ಬಳಿಕ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. (ಏಜೆನ್ಸೀಸ್)