

ಲಾತೂರ್: ಮಹಾರಾಷ್ಟ್ರದ ಲಾತೂರ್ನ ಆರ್ವಿ ಗ್ರಾಮದ ಬಳಿ ಶನಿವಾರ ಕ್ರೂಸರ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮಕ್ಕಳು ಮತ್ತು ಮಹಿಳೆಯರು ಸೇರಿ 7 ಮಂದಿ ಮೃತಪಟ್ಟಿದ್ದಾರೆ. 11 ಜನರ ಸ್ಥಿತಿ ಗಂಭೀರವಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಮೃತದೇಹಗಳು ಛಿದ್ರಛಿದ್ರವಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಭೀಕರ ದೃಶ್ಯ ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ನಿರ್ಮಲಾ ಸೋಮವಂಶಿ(38), ಸ್ವಾತಿ ಬೋಡ್ಕೆ(35), ಶಕುಂತಲಾ ಸೋಮವಂಶಿ(38), ಸೂಜರಬಾಯಿ ಕದಂ (37), ಚಿತ್ರಾ ಶಿಂಧೆ(35), ಚಾಲಕ ಖಂಡು ರೋಹಿಲೆ(35) ಸೇರಿ 7 ಮಂದಿ ಮೃತಪಟ್ಟಿದ್ದಾರೆ. ತಾರ್, ರಾಜಮತಿ ಸೋಮವಂಶಿ (50), ಸೋನಾಲಿ ಸೋಮವಂಶಿ (25), ರಂಜನಾ ಮಾನೆ(35), ಪರಿಮಳಾ ಸೋಮವಂಶಿ(70), ದತ್ತಾತ್ರೆ ಪವಾರ್(40), ಶಿವಾಜಿ ಪವಾರ್ (45), ಯಶ್ ಬೋಡ್ಕೆ(9), ಶ್ರುತಿಕಾ ಪವಾರ್(6), ಗುಲಾಬ್ರಾವ್ ಸೋಮವಂಶಿ (50) ಮತ್ತು ಕಮಲ್ ಜಾಧವ್ (30) ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.