PHOTOS| ಅನ್​ಲಾಕ್​ಗೂ ಮುನ್ನವೇ ಗಂಟು ಮೂಟೆ ಸಮೇತ ಬೆಂಗಳೂರಿನತ್ತ ಪ್ರಯಾಣ

lockdown--bangalore entry
Published on

ಬೆಂಗಳೂರು: ಕರೊನಾ ಹಿನ್ನೆಲೆ ರಾಜ್ಯಾದಂತ ಲಾಕ್​ಡೌನ್​ ಘೋಷಣೆಯಾಗುತ್ತಿದ್ದಂತೆ ಲಕ್ಷಾಂತರ ಮಂದಿ ಗಂಟು ಮೂಟೆ ಸಮೇತ ಬೆಂಗಳೂರು ತೊರೆದು ಸ್ವಗ್ರಾಮದತ್ತ ಹೊರಟಿದ್ದರು. ಏ.27ರ ಆಸುಪಾಸಿನಲ್ಲಿ ಸಾವಿರಾರು ಮಂದಿ ಬಸ್​, ರೈಲು, ಆಟೋ, ಕಾರು, ಟ್ರ್ಯಾಕ್ಟರ್​, ಟೆಂಪೋ, ಬೈಕ್​ಗಳಲ್ಲಿ ಲಗೇಜು ತುಂಬಿಕೊಂಡು ಆತಂಕದಲ್ಲೇ ಊರು ತೊರೆದಿದ್ದರು. ಸದಾ ಜನರಿಂದ ಗಿಜಿಗುಡುತ್ತಿದ್ದ ರಾಜ್ಯ ರಾಜಧಾನಿ ಬೆಂಗಳೂರು ಸ್ತಬ್ಧಗೊಂಡಂತೆ ಭಾಸವಾಗುತಿತ್ತು. ಇದೀಗ ಇನ್ನು ಕೆಲವೇ ದಿನದಲ್ಲಿ ಅನ್​ಲಾಕ್​ ಆಗುತ್ತೆ ಎಂಬ ಸುಳಿವು ಸಿಕ್ಕ ಬೆನ್ನಲ್ಲೇ ಸಾವಿರಾರು ಮಂದಿ ಅದೇ ಆತಂಕದಲ್ಲೇ ಬೆಂಗಳೂರಿನತ್ತ ಮತ್ತೆ ಮುಖ ಮಾಡಿದ್ದಾರೆ. ನೆಲಮಂಗಲ ಟೋಲ್​ ಬಳಿ ಸೋಮವಾರ ಬೆಳಗ್ಗೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹಲವರು ಬೈಕ್​ನಲ್ಲಿ ಗಂಟುಮೂಟೆ ಕಟ್ಟಿಕೊಂಡು ಬರುತ್ತಿದ್ದ ದೃಶ್ಯ ವಿಜಯವಾಣಿ ಫ್ರೋಟೋಗ್ರಾಫರ್​ ರಾಘವೇಂದ್ರ ಸಿ. ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net