ಹಾಸ್ಯನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದಾಳಿ

bullet prakash
Published on

ಬೆಂಗಳೂರು: ಹಾಸ್ಯನಟ ದಿ. ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಮೇಲೆ ನಿನ್ನೆ ರಾತ್ರಿ ಕೆಲ ಮಂಗಳಮುಖಿಯರು ದಾಳಿ ಮಾಡಿದ್ದಾರೆ.

ಮಂಗಳವಾರ ರಾತ್ರಿ 9 ಗಂಟೆಗೆ ಜಿಮ್​ ಮುಗಿಸಿ ರಕ್ಷಕ್​ ಮನೆಗೆ ವಾಪಸ್​ ಆಗುತ್ತಿದ್ದರು. ಈ ವೇಳೆ ಹೆಬ್ಬಾಳ ಬಳಿ ಕೆಲ ಮಂಗಳಮುಖಿಯರು ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಜಿಮ್​ನಿಂದ ಬೈಕ್​ನಲ್ಲಿ ಮನೆಗೆ ಹೋಗುತ್ತಿದ್ದ ರಕ್ಷಕ್​ರನ್ನು ಅಡ್ಡಗಟ್ಟಿದ ಮಂಗಳಮುಖಿಯರು ಬ್ಯಾಗ್​ ಹಿಡಿದು ಎಳೆದಾಡಿದ್ದಾರೆ. ಆಗ ರಕ್ಷಕ್​ ಬೈಕ್​ನಿಂದ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಮಂಗಳಮುಖಿಯರ ದಾಳಿಯಿಂದ ತಪ್ಪಿಸಿಕೊಳ್ಳಲು ಫ್ಲೈ ಓವರ್ ಮೇಲೆಯೇ ಬೈಕ್ ಬಿಟ್ಟು ರಕ್ಷಕ್​ ಓಡಿಹೋಗಿ ಬಳಿ ಹೆಬ್ಬಾಳ ಪೊಲೀಸರ ಸಹಾಯದಿಂದ ರಕ್ಷಕ್ ತನ್ನ ಬೈಕ್ ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ರಕ್ಷಕ್​ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net