

ಬೆಂಗಳೂರು: ಹಿರಿಯ ಅಧಿಕಾರಗಳ ಜತೆ ವಿಧಾನಸೌಧದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಸಭೆ ನಡೆಸಿದರು. ಗುಪ್ತರಚರ ಇಲಾಖೆಯ ಹಿರಿಯ ಅಧಿಕಾರಿಗಳು, ಸರ್ಕಾರದ ಮುಖ್ಯಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ದಕ್ಷ- ಪ್ರಾಮಾಣಿಕ-ಜನಪರ ಆಡಳಿತ ನನ್ನ ಗುರಿ. ಇಲಾಖೆಗಳ ನಡುವಿನ ಹೊಂದಾಣಿಕೆ ಮುಖ್ಯ. ಕಾಲಮಿತಿಯಲ್ಲಿ ಯೋಜನೆಗಳು ಕಾರ್ಯಕ್ರಮ ಅನುಷ್ಠಾನ ಆಗಬೇಕು. ಟೀಮ್ ವಕ್೯ ಆಗಬೇಕು. ಅಧಿಕಾರಿಗಳು ಏನೇ ಮಾಡಿದರೂ ನಡೆಯುತ್ತದೆ ಎಂಬುದನ್ನು ಸಹಿಸುವುದಿಲ್ಲ. ಹಣಕಾಸಿನ ಶಿಸ್ತನ್ನು ತರುವುದು ಬಹಳ ಅವಶ್ಯಕತೆ ಇದೆ. ಮಾ.31ರರೊಳಗೆ ಎಲ್ಲ ಇಲಾಖೆಯಲ್ಲೂ ಅನಗತ್ಯ ಖರ್ಚು ವೆಚ್ಚವನ್ನ ಕಡಿಮೆ ಮಾಡಬೇಕು. ಕನಿಷ್ಠ ಶೇ.5 ಆದರೂ ಇಳಿಕೆ ಮಾಡಬೇಕು. ಮುಂಬರುವ ದಿನ ಫೈಲ್ ಮೂಮೆಂಟ್ಗೆ ಹೊಸ ಯೋಚನೆ ಮಾಡಲಾಗುವುದು ಎಂದು ಸಿಎಂ ಹೇಳಿದರು.