ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿ ಪ್ರಥೀತ್ ಸಾಧನೆ

prthith
Published on

ಕಾರ್ಕಳ: ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಥೀತ್ ಆರ್.ಉಪಾಧ್ಯಾಯ ಉತ್ತೀರ್ಣರಾಗಿದ್ದಾರೆ. ಕ್ರೈಸ್ಟ್‌ಕಿಂಗ್ ಕಾಲೇಜಿನಲ್ಲಿಯೇ ತರಬೇತಿ ಪಡೆದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶದಲ್ಲಿಯೂ ಪ್ರಥೀತ್ ಉಪಾಧ್ಯಾಯ ರಾಜ್ಯಮಟ್ಟದಲ್ಲಿ ಹತ್ತನೇ ರ‌್ಯಾಂಕ್ ಪಡದಿದ್ದರು. ನಿಟ್ಟೆ ಬೋರ್ಗಲ್‌ಗುಡ್ಡೆ ನಿವಾಸಿ ರಾಘವೇಂದ್ರ ಉಪಾಧ್ಯಾಯ ಹಾಗೂ ಸುಮಂಗಲಾ ಉಪಾಧ್ಯಾಯ ಅವರ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net