ಮನೆಯ ಅಂಧ, ಆಕರ್ಷಣೆ ಹೆಚ್ಚಿಸುವ ಕಾಲಿಂಗ್ ಬೆಲ್; ವಿವಿಧ ಮಂತ್ರ, ಶ್ಲೋಕ, ಸಂಗೀತದ ಜೋಡಣೆ

bell
Published on

ಬೆಂಗಳೂರು : ಜೀವನದಲ್ಲಿ ಒಂದು ಸ್ವಂತ ಮನೆಯನ್ನು ನಿರ್ಮಿಸಬೇಕೆಂಬ ಬಯಕೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುತ್ತದೆ. ಆದರೆ ಇಂದಿನ ದುಬಾರಿ ಬದುಕಿನಲ್ಲಿ ಎಲ್ಲರ ಕನಸುಗಳು, ಬಯಕೆಗಳು ಅಷ್ಟು ಸುಲಭವಾಗಿ ಈಡೇರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಷ್ಟಾಗಿಯೂ ಶ್ರಮಪಟ್ಟು ನಿರ್ಮಿಸಿದ ಮನೆಯ ಅಂಧವನ್ನು ಬೇರೆಲ್ಲರಿಗಿಂತ ಆಕರ್ಷಕವಾಗಿ ಕಾಣುವಂತೆ ಮಾಡಬೇಕೆಂಬ ಇಚ್ಛೆ ಇರುತ್ತದೆ. ಅಂತಹ ಮನೆಯ ಅಂಧ ಮತ್ತು ಆಕರ್ಷಣೆ ಹೆಚ್ಚಿಸುವಲ್ಲಿ ಕರೆ ಘಂಟೆ (ಕಾಲಿಂಗ್ ಬೆಲ್) ಕೂಡಾ ಒಂದು ಪ್ರಮುಖ ವಸ್ತು. ಮನೆಯ ಒಳಾಂಗಣ ವಿನ್ಯಾಸ, ರ್ನಿಚರ್ ಇತ್ಯಾದಿ ವಸ್ತುಗಳು ಮನೆಯೊಳಗೆ ಬಂದ ನಂತರ ಕಣ್ಣಿಗೆ ಆಕರ್ಷಣೆಯಾಗಿರುತ್ತವೆ. ಆದರೆ ಕಾಲಿಂಗ್ ಬೆಲ್ ಮನೆ ಹೊರಗಿನಿಂದಲೇ ವಿಶಿಷ್ ವಿನ್ಯಾಸದಿಂದ ದೃಷ್ಟಿಗೆ ಹಾಗು ಅದರ ಶಬ್ದದಿಂದ ಕಿವಿಗೆ ಕೂಡಾ ಆಕರ್ಷಕವಾಗಿರುತ್ತದೆ. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಕಾಲಿಂಗ್ ಬೆಲ್‌ಗಳು ಒಂದೇ ತರನಾದ ಒಂದರ್ಥದಲ್ಲಿ ಕರ್ಕಶವಾದ ಶಬ್ಧದಿಂದ ಕೂಡಿದ್ದವು. ಆದರೆ ಆಧುನಿಕ ಆವಿಷ್ಕಾರಗಳು ನಡೆದಂತೆ ಕಾಲಿಂಗ್ ಬೆಲ್‌ಗಳ ವಿನ್ಯಾಸಗಳು, ಸಂಯೋಜಿತ ಶಬ್ದಗಳು ಕೂಡಾ ಬಹಳ ಆಕರ್ಷಕವಾಗಿವೆ. ಇಂಪಾದ ಶಬ್ದಗಳ ಜೊತೆಗೆ ವಿವಿಧ ಶ್ಲೋಕ, ಮಂತ್ರ, ಹಾಡು, ಕೆಲವು ೋಷಣೆಗಳನ್ನು ಕಾಲಿಂಗ್ ಬೆಲ್‌ಗಳು ಹೊಂದಿವೆ. ಹಾಗೂ ಇನ್ನೂ ಮುಂದುವೆರೆದು ಅತ್ಯಾಧುನಿಕ ಕಾಲಿಂಗ್ ಬೆಲ್‌ಗಳಲ್ಲಿ ಸಿಸಿ ಕ್ಯಾಮೆರಾಗಳು ಅಳವಡಿಸಲ್ಪಟ್ಟಿದ್ದು, ಹೊರಗಿನಿಂದ ಬಂದ ವ್ಯಕ್ತಿ ಕಾಲಿಂಗ್ ಬೆಲ್ ಒತ್ತಿದಾಗ ಮನೆಯೊಳಗಿದ್ದವರಿಗೆ ಹೊರಗೆ ಬಂದಿರುವ ವ್ಯಕ್ತಿಯ ಚಿತ್ರ ತಿಳಿಯುತ್ತದೆ. ಅದನ್ನು ಆಧರಿಸಿ ಮನೆಯ ಬಾಗಿಲನ್ನು ತೆರೆಯಲು ಅನುಕೂಲವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅಪರಿಚಿತ ವ್ಯಕ್ತಿಗಳು ಬಂದಾಗ ಎಚ್ಚರಿಕೆಯಿಂದ ನಡೆದುಕೊಳ್ಳಲು ಈ ಅತ್ಯಾಧುನಿಕ ಕಾಲಿಂಗ್ ಬೆಲ್‌ಗಳು ಸಹಕಾರಿಯಾಗಿರುತ್ತವೆ.

ಮನಸ್ಸಿಗೆ ಮುದ ನೀಡುವ ಧ್ವನಿ

ಕಾಲಿಂಗ್ ಬೆಲ್‌ಗಳು ಈ ಹಿಂದೆ ಕೇವಲ ತಾಂತ್ರಿಕ ಶಬ್ದವನ್ನು ಒಳಗೊಂಡಿದ್ದವು. ಆದರೆ ಇತ್ತೀಚಿನ ಆಧುನಿಕ ಕಾಲಿಂಗ್ ಬೆಲ್‌ಗಳು ಮನಸ್ಸಿಗೆ ಮುದ ನೀಡುವಂತಹ ಸಂಗೀತದಿಂದ ಒಳಗೊಂಡಿವೆ. ಗಾಯಿತ್ರಿ ಮಂತ್ರ, ಪಂಚಾಕ್ಷರಿ ಮಂತ್ರ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಇತ್ಯಾದಿ ವಿಶೇಷ ಶಕ್ತಿ ಇರುವ ಮಂತ್ರಗಳನ್ನು ಅಳವಡಿಸಿರುವ ಕಾಲಿಂಗ್ ಬೆಲ್‌ಗಳಿವೆ. ಈ ಕಾಲಿಂಗ್ ಬೆಲ್‌ಗಳ ಬಳಕೆಯಿಂದ ಮನೆಯಲ್ಲಿ ಮೇಲಿಂದ ಮೇಲೆ ಸಕಾರಾತ್ಮಕ ಶಕ್ತಿವೃದ್ಧಿಗೂ ಕಾರಣವಾಗಿರುತ್ತದೆ. ಇದರ ಜೊತೆಗೆ ಪಾರಂಪರಿಕ ಮಾದರಿಯ ಓಂಕಾರ ನಾದ ಹೊರಹೊಮ್ಮುವ ಕಂಚಿನ ಘಂಟೆಗಳನ್ನು ಕೂಡಾ ಕೆಲವರು ಬಳಸುವವರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net