

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಗೂಳಿಯೊಂದು ಸದ್ದು ಮಾಡುತ್ತಿದೆ. ಅದು ನಿರ್ಮಾಣ ಹಂತದಲ್ಲಿರುವ ಮನೆಯ ಮೊದಲ ಮಹಡಿಯಿಂದ ಭೂಮಿಗೆ ಜಿಗಿದು ಸಾಹಸ ಮೆರೆದಿದೆ. ಪ್ರಸ್ತುತ ಇದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
ವೈರಲ್ ವೀಡಿಯೋದಲ್ಲಿ ಮೇಲಿಂದ ಕೆಳಗೆ ಜಿಗಿದ ಗೂಳಿ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಗೂಳಿ ಹಿಂದೆ ಮುಂದೆ ಹೋಗಿ ಕೊನೆಗೆ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲಕ್ಕೆ ಏರಿದೆ. ಸ್ವಲ್ಪ ಹೊತ್ತಿನ ನಂತರ ಹೇಗೆ ಇಳಿಯಬೇಕೆಂದು ತಿಳಿಯದೆ ಆ ಕಡೆ, ಈ ಕಡೆ ನೋಡಿ ಅಂತಿಮವಾಗಿ ಮೊದಲ ಮಹಡಿಯಲ್ಲಿ ಸ್ಟೇರ್ ಕೇಸ್ ಬಳಿ ಬಂದು ಮೇಲಿಂದ ಹಾರಿ ನೆಲಕ್ಕೆ ಬಿದ್ದಿದೆ.
ನೋಡನೋಡುತ್ತಲೇ ಕಟ್ಟಡದ ಮೊದಲ ಮಹಡಿಯಿಂದ ಗೂಳಿ ಜಿಗಿದಿದೆ. ಢಮಾರ್ ಎಂಬ ಶಬ್ಧ ಕೇಳಿ ಕೆಳಗೆ ಕೆಲಸ ಮಾಡುತ್ತಿದ್ದವರೆಲ್ಲ ಬೆಚ್ಚಿಬಿದ್ದರು. ಕೆಳಗೆ ಬಿದ್ದ ಗೂಳಿ ಸ್ವಲ್ಪ ಹೊತ್ತು ಅಲ್ಲೇ ಇತ್ತು. ನಂತರ ಎದ್ದು ಹೋಯಿತು. ಇದರೊಂದಿಗೆ ಈ ವಿಡಿಯೋ ಮುಗಿಯುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಈ ಗೂಳಿಯನ್ನು ದೇವರು ಕಾಪಾಡಿದ್ದಾನೆ’ ಎಂದು ಕೆಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ವಿವಿಧ ರೀತಿಯ ಎಮೋಜಿಗಳ ಮೂಲಕ ಕಾಮೆಂಟ್ ಮಾಡುತ್ತಿದ್ದಾರೆ. ಈ ವೀಡಿಯೊ ಪ್ರಸ್ತುತ 11 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿ ವೈರಲ್ ಆಗಿದೆ.