ಬೆಳಗಾವಿ ಲೋಕಸಭಾ ಕ್ಷೇತ್ರ: ಲಕ್ಷಕ್ಕೂ ಹೆಚ್ಚು ಮತ ಪಡೆದ ಮಂಗಲಾ ಮತ್ತು ಸತೀಶ್​ ಜಾರಕಿಹೊಳಿ, ಗೆಲುವಿನ ಸನಿಹ ಯಾರದ್ದು? ​

WhatsApp Image 2021-05-02 at 12.13.32 AM (1)
Published on

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8ಕ್ಕೆ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಆರಂಭವಾಗಿದೆ. ಶೇ.56.02 ಮತದಾನವಾಗಿದೆ. ಆರಂಭಿಕವಾಗಿ ಕಾಂಗ್ರೆಸ್​ ಮುನ್ನಡೆ ಸಾಧಿಸಿತ್ತಾದಾರೂ 21ನೇ ಸುತ್ತಿಗೆ ಬರುವಷ್ಟರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಬೆಳಗಾವಿಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ನೇರ ಪೈಪೋಟಿ ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​ ಎರಡೂ ಪಕ್ಷಗಳು ಪ್ರತಿಷ್ಠೆಯನ್ನ ಪಣಕ್ಕಿಟ್ಟು ಹೋರಾಟ ನಡೆಸಿದ್ದು, ಗೆಲುವಿನ ಅಂತರ ಬಹಳ ಇರಲಾರದು ಎಂಬುದಕ್ಕೆ 21ನೇ ಸುತ್ತಿನ ಮತ ಎಣಿಕೆಯಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳೇ ಸಾಕ್ಷಿ.

ಕೇಂದ್ರದ ಮಾಜಿ ಸಚಿವ ದಿವಂಗತ ಸುರೇಶ್​ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರನ್ನು ಬಿಜೆಪಿ ಕಣಕ್ಕಿಳಿಸಿ, ಅನುಕಂಪದ ಮತಗಳನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಎದುರಾಳಿಯಾಗಿದ್ದಾರೆ. ಮರಾಠ ಸಮುದಾಯದ ಮತಗಳನ್ನು ಸೆಳೆಯಲೆಂದು ಎಂಇಎಸ್​ ಕೂಡ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಿತ್ತು.

1ನೇ ಸುತ್ತು

ಬಿಜೆಪಿ- 6445

ಕಾಂಗ್ರೆಸ್- 9613

ಕಾಂಗ್ರೆಸ್​ಗೆ 3168 ಮತಗಳ ಮುನ್ನಡೆ

6ನೇ ಸುತ್ತು

ಕಾಂಗ್ರೆಸ್- 18004

ಬಿಜೆಪಿ- 14418

ಕಾಂಗ್ರೆಸ್​ಗೆ 3586 ಮತಗಳ ಮುನ್ನಡೆ

7ನೇ ಸುತ್ತು

ಕಾಂಗ್ರೆಸ್‌- 25432

ಬಿಜೆಪಿ- 22780

ಕಾಂಗ್ರೆಸ್​ಗೆ 2652 ಮತಗಳ ಮುನ್ನಡೆ

9ನೇ ಸುತ್ತು

ಕಾಂಗ್ರೆಸ್- 33841

ಬಿಜೆಪಿ- 32272

ಕಾಂಗ್ರೆಸ್​ಗೆ 1569 ಮತಗಳ ಮುನ್ನಡೆ

10ನೇ ಸುತ್ತು

ಬಿಜೆಪಿ-39631

ಕಾಂಗ್ರೆಸ್-38170

ಬಿಜೆಪಿಗೆ 1461 ಮತಗಳ ಮುನ್ನಡೆ

21ನೇ ಸುತ್ತು

ಬಿಜೆಪಿ-65854

ಕಾಂಗ್ರೆಸ್-62828

ಬಿಜೆಪಿಗೆ 3026 ಮತಗಳ ಮುನ್ನಡೆ

28ನೇ ಸುತ್ತು

ಬಿಜೆಪಿ- 1,13,912

ಕಾಂಗ್ರೆಸ್- 1,04,133

ಬಿಜೆಪಿಗೆ 9779 ಮತಗಳ ಮುನ್ನಡೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net