ಬೆಂಗಳೂರಲ್ಲಿ ಆಟೋ ಚಾಲಕನನ್ನು ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ವೈದ್ಯರ ಗ್ಯಾಂಗ್​!

party
Published on

ಬೆಂಗಳೂರು: ಆಟೋ ಚಾಲಕನೊಬ್ಬನ ಮೇಲೆ ಹಲ್ಲೆ ವೈದ್ಯ ಮತ್ತು ಆತನ ಸಹಚರರು ಹಲ್ಲೆ ಮಾಡಿ ವಿವಸ್ತ್ರಗೊಳಿಸಿ ಶೌಚಗೃಹಕ್ಕೆ ಕರೆದೊಯ್ದು ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಹೀನ ಕೃತ್ಯ ಎಸಗಿರುವ ಘಟನೆ ಬಾಗಲೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಲಹಂಕ ನಿವಾಸಿ ಮುರುಳಿ(26) ಹಲ್ಲೆಗೊಳಗಾದ ಆಟೋ ಚಾಲಕ. ಚಾಲಕ ನೀಡಿದ‌ ದೂರಿನ ಮೇರೆಗೆ ಖಾಸಗಿ ಆಸ್ಪತ್ರೆಯೊಂದರ ವೈದ್ಯ ರಾಕೇಶ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗೆ ಬಲೆ ಬೀಸಿದ್ದಾರೆ.

ಆರೋಪಿ ರಾಕೇಶ್​ ಬಾಗಲೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಹಲವು ಬಾರಿ ಮುರಳಿ ಆಟೋದಲ್ಲೇ ಪ್ರಯಾಣಿಸಿ ಸಲುಗೆ ಬೆಳೆಸಿಕೊಂಡಿದ್ದ. ನ.4ರಂದು ಖಾಸಗಿ ಹೋಟೆಲ್​ನಲ್ಲಿ ವೈದ್ಯರಿಂದ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ವೈದ್ಯ ರಾಕೇಶ್​ನ ಅಣತಿಯಂತೆ ಅಡುಗೆ ವಸ್ತುಗಳನ್ನು ಸಾಗಿಸಲು ಹೋಟೆಲ್​ಗೆ ಆಟೋ ಚಾಲಕ ಬಂದಿದ್ದ. ಆಗ ಮತ್ತೊಬ್ಬ ವೈದ್ಯನನ್ನು ಆಟೋದಲ್ಲಿ ಕರೆದುಕೊಂಡು ಬರುವಂತೆ ರಾಕೇಶ್​ ಸೂಚಿಸಿದ್ದ. ಅದರಂತೆ ವೈದ್ಯ ಸ್ವಾಮಿಯನ್ನು ಆಟೋ ಚಾಲಕ ಕರೆತಂದಿದ್ದ. ಬರುವುದು ತಡವಾಯ್ತೆಂದು ರಾಕೇಶ್​ ಕುಡಿದ ಮತ್ತಿನಲ್ಲಿ ಚಾಲಕನಿಗೆ ತರಾಟೆಗೆ ತೆಗೆದುಕೊಂಡಿದ್ದ. ಇದೇ ವಿವಾರಕ್ಕೆ ಮಾತಿಗೆ ಮಾತು ಬೆಳೆದಿದೆ.

ಬಳಿಕ ಸಿಟ್ಟಿಗೆದ್ದ ರಾಕೇಶ್​, ತನ್ನನ್ನು ರೋಗಿಗಳ ಎದುರು ಆಟೋಚಾಲಕ ಮುರುಳಿ ಅವಮಾನಿಸಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದ. ಇದಕ್ಕೆ ಆತನ ಸಹಚರರು ಸಾಥ್​ ಕೊಟ್ಟಿದ್ದು, ಚಾಲಕನನ್ನು ವಿವಸ್ತ್ರಗೊಳಿಸಸಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಹೀನ ಕೃತ್ಯವೆಸಗಿ ಅಲ್ಲಿಂದ ವೈದ್ಯರ ಗ್ಯಾಂಗ್​ ಪರಾರಿಯಾಗಿದೆ. ಮಾರನೇ ದಿನ ಎಚ್ಚರಗೊಂದ ಚಾಲಕ, ಬೆತ್ತಲೆಯಾಗಿಯೇ ಹೊರಬಂದು ಸ್ಥಳೀಯರ ನೆರವಿನಿಂದ ಮನೆಗೆವರಿಗೆ ವಿಷಯ ತಿಳಿಸಿ ಬಾಗಲೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಯಲಹಂಕ ಆಸ್ಪತ್ರೆಗೆ ಮುರುಳಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net