ಜ್ಯೋತಿಷ್ಯ ಕೇಳಿ ಹೊರ ಬಂದ ತಕ್ಷಣವೇ ಅಜ್ಜಿ-ಮೊಮ್ಮಗನಿಗೆ ಕಾದಿತ್ತು ಬಿಗ್​ ಶಾಕ್​!

Astrologer
Published on

ಶಿವಮೊಗ್ಗ: ಯಾವುದೋ ಕಷ್ಟದಲ್ಲಿ ಸಿಲುಕಿದ್ದ ಅಜ್ಜಿ-ಮೊಮ್ಮಗ ಇಬ್ಬರೂ ಇರದಿಂದ ಮುಕ್ತಿ ಪಡೆಯುವ ನಿಟ್ಟಿನಲ್ಲಿ ದೇವಸ್ಥಾನದ ಅರ್ಚಕರೊಬ್ಬರ ಬಳಿ ಜ್ಯೋತಿಷ್ಯ ಕೇಳಲು ಬಂದಾಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಯ್ಯೋ, ದೇವ್ರೇ ಕಷ್ಟ ಸಹಿಸೋಕೆ ಆಗ್ತಿಲ್ಲ, ಇದರಿಂದ ಮುಕ್ತಿ ಬೇಕು ಅಂತ ಬಂದ್ರೆ ಮತ್ತಷ್ಟು ತೊಂದರೆಗೆ ಸಿಲುಕಿಸಿಬಿಟ್ಟೆಯಲ್ಲಪ್ಪಾ... ಎಂದು ಅಜ್ಜಿ-ಮೊಮ್ಮಗ ಮರುಗಿದ್ದಾರೆ.

ಹೌದು, ನಮಗೂ ಒಳ್ಳೆಯ ದಿನ ಬರುತ್ತಾ? ನಮ್ಮ ಕಷ್ಟ ಯಾವಾಗ ನಿವಾರಣೆಯಾಗುತ್ತೆ? ಎಂದು ತಿಳಿಯುವ ಸಲುವಾಗಿ ಭದ್ರಾವತಿ ತಾಲೂಕಿನ ದಡಮಘಟ್ಟ ರಸ್ತೆಯ ಕವಲಗುಂದಿಯ ಮಹಿಳೆಯೊಬ್ಬರು ಮೊಮ್ಮಗನ ಜೊತೆ ಸ್ಕೂಟಿಯಲ್ಲಿ ಜನ್ನಾಪುರದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದರು. ಅರ್ಚಕರ ಮನೆ ಮುಂದೆ ಸ್ಕೂಟಿ ನಿಲ್ಲಿಸಿ, ಜ್ಯೋತಿಷ್ಯ ಕೇಳಲು ಹೋಗಿದ್ದರು. ಜ್ಯೋತಿಷ್ಯ ಕೇಳಿ ವಾಪಸ್ ಬಂದು ನೋಡಿದಾಗ ಸ್ಕೂಟಿ ಕಳವು ಆಗಿತ್ತು. ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net