ಬೆಂಗಳೂರು: ಮಹಿಳೆಯರಿಗೆ ಸುರಕ್ಷಿತ ನಗರವನ್ನಾಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಸೇಫ್ ಸಿಟಿ ಪ್ರಾಜೆಕ್ಟ್’ ಅನ್ನು ರಾಜ್ಯದಲ್ಲಿ ಅಳವಡಿಸಲು ಬಿಜೆಪಿ ಸರ್ಕಾರ ವಿಳಂಬ ಮಾಡುವ ಮೂಲಕ ನಗರದಲ್ಲಿ ಕ್ರೈಂ ರೇಟ್ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ, ದೆಹಲಿಯಲ್ಲಿ ನಿರ್ಭಯಾ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ದೆಹಲಿ ನಗರ ಪೊಲೀಸ್ ಈ ಯೋಜನೆಯನ್ನು ರೂಪಿಸಿತ್ತು. 2018ರಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರದ ಗೃಹ ಇಲಾಖೆ ಅನುಮತಿ ನೀಡಿತ್ತು. ಈ ಯೋಜನೆಯಡಿ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಲಕ್ನೋ, ಅಹಮದಾಬಾದ್ ಮತ್ತು ಕೋಲ್ಕತ್ತಾ ನಗರಗಳಿಗೆ ಹಣಕಾಸಿನ ನೆರವನ್ನು ಒದಗಿಸಲಾಗಿತ್ತು. ಬೆಂಗಳೂರು ನಗರಕ್ಕೆ ಮೊದಲ ಹಂತವಾಗಿ 667 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಈ ಹಣ ಬಳಸಿಕೊಂಡು ನಗರದಾದ್ಯಂತ ಮೂರು ವರ್ಷಗಳ ಅವಧಿಯಲ್ಲಿ 16 ಸಾವಿರ ಕ್ಯಾಮರಾ ಅಳವಡಿಸುವುದು ಪ್ರಮುಖ ಗುರಿಯಾಗಿತ್ತು. ಅಲ್ಲದೆ, 50 “ಸೇಫ್ಟೀ ಐಲ್ಯಾಂಡ್” ರೂಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಆದ್ರೆ ಈ ಯೋಜನೆ ಅನುಷ್ಠಾನ ಮಾಡವಲ್ಲಿ ರಾಜ್ಯ ಸರ್ಕಾರ ವಿನಾಕಾರಣ ವಿಳಂಬ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.
ಇಂತಹ ಮಹತ್ವಪೂರ್ಣ ಯೋಜನೆಯ ಅನುಷ್ಠಾನಕ್ಕೆ ಜೆಸಿಬಿ ಸರ್ಕಾರಗಳು ಗ್ರಹಣ ಹಿಡಿಸಿವೆ. ಪರಿಣಾಮ ಮಹಿಳೆಯರ ವಿರುದ್ಧ ಅಫರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ನಿರ್ಭಯಾ ನಿಧಿಯನ್ನು ಬಳಸಿಕೊಳ್ಳದೆ ಇರುವ ಮೂಲಕ ನಗರದಲ್ಲಿ ಅಫರಾಧ ಅದರಲ್ಲೂ ಮಹಿಳೆಯರ ಮೇಲಿನ ಅಫರಾಧ ಚಟುವಟಿಕೆಗಳು ಹೆಚ್ಚಾಗಿವೆ. ಯೋಜನೆಯನ್ನು ವಿನಾಕಾರಣ ವಿಳಂಬ ಮಾಡಿದ ಬಿಜೆಪಿ ಸರ್ಕಾರವೇ ಇದಕ್ಕೆ ಮೂಲ ಕಾರಣ ಎಂದು ಗಂಭೀರ ಆರೋಪ ಮಾಡಿದ ಬೆಂಗಳೂರು ನಗರ ಎಎಪಿ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಾ ಸ್ವಾಮಿ, ಇನ್ನಾದರೂ ರಾಜ್ಯ ಸರ್ಕಾರ ಈ ಯೋಜನೆ ಅಳವಡಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ನಗರವನ್ನು ಮಹಿಳೆಯರಿಗಾಗಿ ಸುರಕ್ಷಿತವಾಗಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದಿಂದ ಅನುದಾನ ಪಡೆದುಕೊಳ್ಳುವ ಮೂಲಕ ದೆಹಲಿಯಲ್ಲಿ ಪ್ರತಿ ಒಂದು ಚದರ ಮೈಲಿಗೆ 1826.6 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಸರ್ವೇಲೆನ್ಸ್ ಕ್ಯಾಮರಾಗಳನ್ನು ಹೊಂದಿರುವ ನಗರ ಎಂಬ ಹೆಗ್ಗಳಿಕೆ ದೆಹಲಿದೆ ಬಂದಿದೆ. ಲಂಡನ್ ನಗರ 2ನೇ ಸ್ಥಾನದಲ್ಲಿದ್ದು, 3 ಸ್ಥಾನವನ್ನು ಚೈನ್ನೈ ಪಡೆದುಕೊಂಡಿದೆ ಎಂದು ಮೋಹನ್ ದಾಸರಿ ಮಾಹಿತಿ ನೀಡಿದರು. ಇಂತಹ ಯೋಜನೆ ಕಾರ್ಯರೂಪಕ್ಕೆ ತರುಲು ಈವರೆಗೂ ನಾಲ್ಕು ಟೆಂಡರ್ ಕರೆದಿರುವ ರಾಜ್ಯ ಸರ್ಕಾರ ಕೊನೆಗೂ ಯೋಜನೆ ಅನುಷ್ಠಾನಕ್ಕೆ ಕಂಪನಿಯೊಂದನ್ನು ಅಂತಿಮಗೊಳಿಸುವ ಹಂತಕ್ಕೆ ತಲುಪಿದೆ. ಇನ್ನಾದರೂ ಈ ಕಾರ್ಯಚುರುಕಾಗಿ ಸಾಗಬೇಕಿದೆ ಎಂದರು. ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಯೋಜಕ ವಿಜಯ್ ಶಾಸ್ತ್ರಿಮಠ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ರೇವತಿ ಉದಾಸಿಗೆ ತಪ್ಪಿದ ಟಿಕೆಟ್: ಬೀದಿಗಿಳಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ
ಬಿಎಸ್ವೈ ಆಪ್ತನ ಮನೆ ಮೇಲೆ ಐಟಿ ದಾಳಿ! ವಿಜಯೇಂದ್ರ, ರಾಘವೇಂದ್ರರ ವ್ಯವಹಾರದಲ್ಲೂ ಉಮೇಶನ ಕೈಚಳಕ…
ಮಗು ಸಾಯುವ ಭಯದಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆ! ಈ ಸಾವಿಗೆ ಹಿಂದಿನ ದುರ್ಘಟನೆಯೇ ಕಾರಣವಾಯ್ತಾ?