More

    ರೇವತಿ ಉದಾಸಿಗೆ ತಪ್ಪಿದ ಟಿಕೆಟ್​: ಬೀದಿಗಿಳಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ

    ಬೆಂಗಳೂರು: ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್​ ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣಾ ಸಮರ ರಂಗೇರಿದ್ದು, ಇಂದು ಎರಡೂ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ.

    ಹಾನಗಲ್​ಗೆ ಶಿವರಾಜ ಸಜ್ಜನರ್​, ಸಿಂದಗಿಗೆ ಭೂಸನೂರಮಠ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಹೈಕಮಾಂಡ್​ ಆಯ್ಕೆ ಮಾಡಿದ್ದು, ಎರಡೂ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಿ.ಎಂ. ಉದಾಸಿ ಅವರ ನಿಧನದಿಂದ ತೆರವಾದ ಹಾನಗಲ್​ ಕ್ಷೇತ್ರಕ್ಕೆ ಉದಾಸಿ ಕುಟುಂಬಸ್ಥರಿಗೇ ಟಿಕೆಟ್​ ಖಾತ್ರಿ ಎಂಬ ಮಾತು ಆರಂಭದಿಂದಲೂ ಕೇಳಿಬಂದಿತ್ತು. ಅರುಣ ಶಹಪೂರ್​ ಅವರಿಗೇ ಸಿಂದಗಿ ಕ್ಷೇತ್ರದ ಟಿಕೆಟ್​ ಫಿಕ್ಸ್​ ಎನ್ನಲಾಗಿತ್ತು. ಆದರೆ ಇಂದು ಅರುಣ ಶಹಪೂರ್​ ಅವರ ಬದಲಾಗಿ ಭೂಸನೂರ ಅವರನ್ನ ಆಯ್ಕೆ ಮಾಡಲಾಗಿದೆ. ಅತ್ತ ಹಾನಗಲ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಸಂಸದ ಶಿವಕುಮಾರ್​ ಉದಾಸಿ ಅವರ ಪತ್ನಿ ರೇವತಿ ಉದಾಸಿ ಅವರ ಆಯ್ಕೆ ಆಗುವುದು ಖಚಿತ ಎಂಬ ಮಾತು ದಟ್ಟವಾಗಿ ಕೇಳಿಬಂದಿತ್ತಾದರೂ ವರಿಷ್ಠರು ಶಿವರಾಜ ಸಜ್ಜನರ್​ಗೆ ಮಣೆ ಹಾಕಿದ್ದಾರೆ.

    ಬಿಜೆಪಿ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಹಾನಗಲ್​ನ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ರೇವತಿ ಉದಾಸಿ ಅವರಿಗೆ ಟಿಕೆಟ್ ಕೊಡಿ. ಇಲ್ಲವಾದರೆ ನಾವೇ ಅವರನ್ನ ಪಕ್ಷೇತರರಾಗಿ ನಿಲ್ಲಿಸುತ್ತೇವೆ ಎಂದು ಬೊಮ್ಮನಹಳ್ಳಿ ಗ್ರಾಮದಲ್ಲಿ ಬಿಜೆಪಿ ಮುಖಂಡರು ಎಚ್ಚರಿಸಿದ್ದಾರೆ. ಉದಾಸಿ ಅವರ ಮನೆತನಕ್ಕೆ ಟಿಕೆಟ್ ಬೇಕೇಬೇಕು ಎಂದು ಉದಾಸಿ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಎರಡೂ ಕ್ಷೇತ್ರಕ್ಕೆ ಅ. 1 ರಿಂದ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಅ. 8 ನಾಮಪತ್ರ ಸಲ್ಲಿಸಲು ಅಂತಿಮ ದಿನ. ನಾಮಪತ್ರ ಹಿಂಪಡೆಯಲು ಅ. 13 ಅಂತಿಮ ದಿನವಾಗಿದೆ. ಅ. 30 ರಂದು ಮತದಾನ ನಡೆಯಲಿದೆ. ನ.2 ರಂದು ಮತ ಎಣಿಕೆ ನಡೆಯಲಿದೆ. ನ. 11ಕ್ಕೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

    ಬಿಎಸ್​ವೈ ಆಪ್ತನ ಮನೆ ಮೇಲೆ ಐಟಿ ದಾಳಿ! ವಿಜಯೇಂದ್ರ, ರಾಘವೇಂದ್ರರ ವ್ಯವಹಾರದಲ್ಲೂ ಉಮೇಶನ ಕೈಚಳಕ…

    ಮನೆ ಕುಸಿದು ಒಂದೇ ಕುಟುಂಬದ 7 ಮಂದಿ ಸಾವು: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ

    ಮಗು ಸಾಯುವ ಭಯದಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆ! ಈ ಸಾವಿಗೆ ಹಿಂದಿನ ದುರ್ಘಟನೆಯೇ ಕಾರಣವಾಯ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts