ಷಡ್ಯಂತ್ರದಿಂದ ನಿಖಿಲ್ ಕುಮಾರಸ್ವಾಮಿಯನ್ನ ಸೋಲಿಸಿದಂತೆ ನನ್ನನ್ನೂ ಸೋಲಿಸಿದ್ರು: ಅಪ್ಪಾಜಿಗೌಡ

appajigowda mandya jds
Published on

ಮಂಡ್ಯ: ನಿಖಿಲ್ ಕುಮಾರಸ್ವಾಮಿ ಅವರನ್ನು ಷಡ್ಯಂತ್ರದಿಂದ ಸೋಲಿಸಿದಂತೆ ನನ್ನನ್ನೂ ಸೋಲಿಸಿದ್ರು. ಜೆಡಿಎಸ್ ಪಕ್ಷವನ್ನ ಸೋಲಿಸಲು ಎಲ್ಲ ಪಕ್ಷದವರೂ ಷಡ್ಯಂತ್ರ ಮಾಡಿದ್ರು. ಕೊನೇ‌ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ನಿವೃತ್ತಿಯಾದ್ರು. ಬಿಜೆಪಿ, ಕಾಂಗ್ರೆಸ್ ಮತ್ತು ರೈತ ಸಂಘ ಒಟ್ಟಾಗಿ ನನ್ನನ್ನು ಸೋಲಿಸಿದ್ರು... ಎಂದು ಮಂಡ್ಯ ವಿಧಾನ ಪರಿಷತ್​ ಚುನಾವಣೆಯಲ್ಲಿ ಸೋಲುಂಡ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ ಗಂಭೀರ ಆರೋಪ ಮಾಡಿದ್ದಾರೆ.

ಮತ ಎಣಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಪ್ಪಾಜಿಗೌಡ, ಈ ಸೋಲಿಗೆ ಅತಿಯಾದ ಆತ್ಮವಿಶ್ವಾಸವೂ ಮುಳುವಾಯ್ತು. ಬಿಜೆಪಿಯ ಮತ ಆ ಪಕ್ಷಕ್ಕೆ(ಕಾಂಗ್ರೆಸ್​) ಹೋಗಿದ್ದರಿಂದಲೇ ನಮಗೆ ಹಿನ್ನಡೆಯಾಯ್ತು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಂದಾಗಿದ್ದು ನನ್ನ ಸೋಲಿಗೆ ಕಾರಣ. ಬಿಜೆಪಿಯು ತನ್ನ ಪಾಲಿನ ಮತಗಳನ್ನು ತಾನೇ ಪಡೆದುಕೊಂಡಿದ್ರೆ ನಾವು ಗೆಲ್ಲುತ್ತಿದ್ದೆವು. ನಾನು ಯಾರನ್ನೂ ಹೊಣೆ ಮಾಡಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ ಕುರಿತು ಮಂಡ್ಯದಲ್ಲಿ ಹೋರಾಟ ಮಾಡೇ ಮಾಡ್ತೀವಿ ಎಂದರು.

ದಿನೇಶ್​ ಗೂಳಿಗೌಡ
ದಿನೇಶ್​ ಗೂಳಿಗೌಡ

ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸೇರಿದಂತೆ ಹಲವು ನಾಯಕರು ಒಟ್ಟಿಗೆ ಸೇರಿ ಜೆಡಿಎಸ್ ಪಕ್ಷವನ್ನ ಸೋಲಿಸಲೇಬೇಕೆಂದು ನಿರ್ಧರಿಸಿ ಕೊನೇ ಗಳಿಗೆಯಲ್ಲಿ ಸೋಲಿಸಿದ್ರು ಎಂದು ಅಪ್ಪಾಜಿಗೌಡ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ 167 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ದಿನೇಶ್ ಗೂಳಿಗೌಡ 2044 ಮತಗಳನ್ನು ಪಡೆದರೆ, ಜೆಡಿಎಸ್​ ಅಭ್ಯರ್ಥಿ 1877 ಮತ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net