More

    ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್​ಗೆ ಆಘಾತ: ಮಂಡ್ಯದಲ್ಲೂ ತೀವ್ರ ಮುಖಭಂಗ

    ಮಂಡ್ಯ: ವಿಧಾನ ಪರಿಷತ್​ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್​ ಪ್ರಾಬಲ್ಯ ಕುಸಿದಿದೆ.

    ಕಳೆದ ಬಾರಿ ಮಂಡ್ಯ, ಮೈಸೂರು, ಕೋಲಾರ, ತುಮಕೂರು ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದ ಜೆಡಿಎಸ್, ಈ ಬಾರಿ ಹಾಸನದಲ್ಲಿ ಮಾತ್ರವೇ ಗೆದ್ದು ಇನ್ನೂ ಮೂರು ಸ್ಥಾನ ಕಳೆದುಕೊಂಡಿದೆ. ಹಾಸನದಲ್ಲಿ ನಿರೀಕ್ಷೆಯಂತೆಯೇ ಸೂರಜ್​ ರೇವಣ್ಣ ಗೆದ್ದಿದ್ದಾರೆ. ಆದರೆ, ಮಂಡ್ಯದಲ್ಲಿ ಜೆಡಿಎಸ್​ಗೆ ತೀವ್ರ ಮುಖಭಂಗ ಉಂಟಾಗಿದೆ.

    ಜೆಡಿಎಸ್​ನ ಭದ್ರಕೋಟೆ ಎಂದೇ ಗುರುತಿಸಲ್ಪಿಟ್ಟಿದ್ದ ಮಂಡ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಸೋತಿದ್ದರು. ಮಂಡ್ಯದಲ್ಲಿ ಮತ್ತೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಜೆಡಿಎಸ್​ ನಾಯಕರು ಪದೇಪದೆ ಆ ಸೋಲಿನ ಕಹಿಯನ್ನ ನೆನಪಿಸಿಕೊಳ್ಳುತ್ತಾ ಈ ಬಾರಿ ಪರಿಷತ್​ ಸ್ಥಾನವನ್ನ ಶತಾಯಗತಾಯ ಜೆಡಿಎಸ್​ ಪಾಲಾಗಿಸಿಕೊಳ್ಳಬೇಕೆಂದು ಶ್ರಮಿಸಿದ್ದರು. ಆದರೆ, ಇದು ಫಲಿಸಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ವಿರುದ್ಧ ಜೆಡಿಎಸ್​ ಅಭ್ಯರ್ಥಿ ಎನ್.ಅಪ್ಪಾಜಿಗೌಡ ಸೋತಿದ್ದಾರೆ. ದಿನೇಶ್ ಗೂಳಿಗೌಡ 2044 ಮತಗಳನ್ನು ಪಡೆದರೆ, ಜೆಡಿಎಸ್​ ಅಭ್ಯರ್ಥಿ 1877 ಮತ ಪಡೆದಿದ್ದಾರೆ. ಒಟ್ಟು 167 ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆದ್ದಿದೆ.

    ಮಂಡ್ಯದಲ್ಲಿ ಚಲಾವಣೆಯಾಗಿದ್ದ ಒಟ್ಟು ಮತ- 4018
    ಕಾಂಗ್ರೆಸ್​ಗೆ- 2044 ಮತ
    ಜೆಡಿಎಸ್- 1877 ಮತ
    ಬಿಜೆಪಿ- 50 ಮತ
    ಪಕ್ಷೇತರ- 02 ಮತ
    ತಿರಸ್ಕೃತ- 46 ಮತ
    167 ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲುವು

    ಮಂಡ್ಯದಲ್ಲಿ ಹಾಲಿ ಸದಸ್ಯರೇ ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಹಿನ್ನೆಲೆ ಅಭ್ಯರ್ಥಿಗಳ ಆಯ್ಕೆ ಮಾಡಲು ದಳಪತಿಗಳು ತೀವ್ರ ಕಸರತ್ತು ನಡೆಸಿದ್ದರು. ಆದರೂ ಕಾಂಗ್ರೆಸ್​ ಅಭ್ಯರ್ಥಿಗೆ ಜೆಡಿಎಸ್​ ತೀವ್ರ ಪೈಪೋಟಿ ಕೊಟ್ಟಿದ್ದಂತೂ ಸುಳ್ಳಲ್ಲ.

    ವಿಧಾನ ಪರಿಷತ್​ ಚುನಾವಣೆ ಮತ ಎಣಿಕೆ: ಗೆದ್ದವರ ಲಿಸ್ಟ್​ ಇಲ್ಲಿದೆ

    ಬೆಂಗಳೂರಲ್ಲಿ ಸಾವಿರ ಕೋಟಿ ಒಡೆಯ ಕೆಜಿಎಫ್​ ಬಾಬುಗೆ ಸೋಲು! ಪರಿಷತ್​ ಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ

    ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts