62ರ ವೃದ್ಧನ ಜೊತೆ 45ರ ಮಹಿಳೆಯ ಮದುವೆ! ಎರಡೇ ದಿನಕ್ಕೆ ಚಿನ್ನದ ಜೊತೆ ವಧು ಪರಾರಿ| viral news

Marriage
Published on

Viral news: ಉತ್ತರ ಪ್ರದೇಶದ ಕಾನ್ಸುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಂಟಿತನದಿಂದ ಬಳಲುತ್ತಿದ್ದ 62 ವರ್ಷದ ನಿವೃತ್ತ ವ್ಯಕ್ತಿಯೊಬ್ಬರು 45 ವರ್ಷದ ಮಹಿಳೆಯನ್ನು ವಿವಾಹವಾಗಿದ್ದಾರೆ. ಇನ್ನೂ ಮದುವೆಯಾದ ಎರಡೇ ದಿನಕ್ಕೆ ವಧು ನಗದು ಹಾಗೂ ಬಂಗಾರದೊಂದಿಗೆ ಪರಾರಿ ಆಗಿದ್ದಾಳೆ. ಆ ವೃದ್ಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದು, ಈ ಸಂಬಂಧ ಪೊಲೀಸರು ಕೂಡ ಈ ವಿಚಾರದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಏನಿದು ಪ್ರಕರಣ?

ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿದ್ದು, ಇಬ್ಬರು ಮದುವೆ ಆಗೋಣ ಎಂದು ನಿರ್ಧರಿಸಿದ್ದಾರೆ. ಇದೇ ಫೆ.11 ರಂದು ಹರೀಶ್ ಪೂಜಾ ಅವರೊಂದಿಗೆ ಬೆನಝಬರ್‌ನಲ್ಲಿರುವ ಆರ್ಯ ಸಮಾಜ ದೇವಸ್ಥಾನದಲ್ಲಿ ಹರೀಶ್ ಕುಮಾರ್ ಶುಕ್ಲಾ ಮದುವೆಯಾಗಿದ್ದಾರೆ.

ನಿವೃತ್ತ ಸಿಒಡಿ ಉದ್ಯೋಗಿಯಾಗಿರುವ ಹರೀಶ್ ಕುಮಾರ್ ಶುಕ್ಲಾ ಎನ್ನುವ 62 ವರ್ಷದ ವೃದ್ಧ, ಚಾಕೇರಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಹರೀಶ್ ಅವರಿಗೆ ತಮ್ಮ ಮನೆಯ ಬಳಿ ಬಾಡಿಗೆಗೆ ವಾಸಿಸುತ್ತಿದ್ದ 45 ವರ್ಷದ ಪೂಜಾ ಎನ್ನುವಾಕೆಯ ಪರಿಚಯವಾಗಿತ್ತು.

ಮದುವೆಯಾದ ದಿನವೇ ಹರೀಶ್ ಪೂಜಾ ಅವರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆಬಾಳುವ ಉಡುಗೊರೆ, ಬೆಲೆಬಾಳುವ ಆಭರಣಗಳನ್ನು ನೀಡಿದ್ದಾರೆ. ಆದರೆ ಮದುವೆಯಾದ ಎರಡೇ ದಿನಕ್ಕೆ ವಧು ಮನೆಯಲ್ಲಿದ್ದ 3 ಲಕ್ಷ ನಗದು ಮತ್ತು 2 ಲಕ್ಷ ಮೌಲ್ಯದ ಆಭರಣಗಳನ್ನು ತೆಗೆದುಕೊಂಡು ಪತ್ನಿ ಹರೀಶ್‌ಗೆ ಗೊತ್ತಾಗದ ಹಾಗೆ ಎಸ್ಕೇಪ್​ ಆಗಿದ್ದಾಳೆ.

(ಏಜೆನ್ಸೀಸ್)

ಇನ್ನೂ ಒಂದೂವರೆ ತಿಂಗಳ ಕಾಲ ಪೂಜಾಳನ್ನು ಹುಡುಕಿ ಸುಸ್ತಾದ ಹರೀಶ್, ಇದೀಗ ನ್ಯಾಯಕ್ಕಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯ ಹುಡುಕಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net