

ಕೋಲ್ಕತ್ತ: ಒಮ್ಮೊಮ್ಮೆ ಗುಡುಗು-ಸಿಡಿಲು, ಧಾರಾಕಾರ ಮಳೆ, ಗಾಳಿ ಬಂದ ವೇಳೆ ಸಾವು-ನೋವು ಕೂಡ ಸಂಭವಿಸುತ್ತೆ. ಸೋಮವಾರ ಒಂದೇ ದಿನ ಸಿಡಿಲು ಬಡಿದು 20 ಮಂದಿ ಸತ್ತಿದ್ದಾರೆ! ಇಂತಹ ಘಟನೆ ಪಶ್ಚಿಮ ಬಂಗಳಾದಲ್ಲಿ ಸಂಭವಿಸಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಹೂಗ್ಲಿ, ಪುರ್ಬಾ ಮೆದಿನಿಪುರ ಸೇರಿ ಮೂರು ಜಿಲ್ಲೆಗಳಲ್ಲಿ ಸೋಮವಾರ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಮುರ್ಷಿದಾಬಾದ್ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ತಲಾ 9 ಜನರು ಸಿಡಿಲಿಗೆ ಬಲಿಯಾದರೆ, ಪುರ್ಬಾ ಮೆದಿನಿಪುರ ಜಿಲ್ಲೆಯಲ್ಲಿ ಇಬ್ಬರು ಸತ್ತಿದ್ದಾರೆ ಎಂದು ಪಶ್ಚೊಮ ಬಂಗಾಳದ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುರ್ಷಿದಾಬಾದ್ನಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಡಿಲು ಬಡಿದು ಮೃತಪಟ್ಟವರ ಕುಟಂಬಸ್ಥರಿಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ, ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ.